alex Certify ಸಿಸಿ ಟಿವಿ ಮೇಲೆ ನಿಗಾ ಇರಿಸುವವರಿಗೆ ಹಣ ನೀಡ್ತಿದೆ ಈ ಕಂಪನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿ ಮೇಲೆ ನಿಗಾ ಇರಿಸುವವರಿಗೆ ಹಣ ನೀಡ್ತಿದೆ ಈ ಕಂಪನಿ..!

ಕೊರೊನಾ ವೈರಸ್​​ ಸಾಂಕ್ರಾಮಿಕದಿಂದಾಗಿ ವರ್ಕ್​ ಫ್ರಮ್​ ಹೋಮ್​ ಅನ್ನೋದು ಕಾಮನ್​ ಆಗಿಬಿಟ್ಟಿದೆ. ಈ ನಡುವೆ ಅನೇಕರು ಕಚೇರಿಗೆ ಹೋಗಲು ಉತ್ಸುಕರಾಗಿದ್ದರೆ ಇನ್ನು ಕೆಲವರು ವರ್ಕ್ ಫ್ರಮ್​ ಹೋಂ ಅನ್ನೇ ಎಂಜಾಯ್​ ಮಾಡ್ತಿದ್ದಾರೆ.

ಅಮೆರಿಕ ಮೂಲಕ ಸಿಸಿಟಿವಿ ಕಂಪನಿಯೊಂದು ನೌಕರಿಗೆ ಅರ್ಜಿ ಆಹ್ವಾನಿಸಿದ್ದು ಈ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವಿಡಿಯೋಗಳನ್ನ ನೋಡುತ್ತಾ ಅಲ್ಲಿರುವ ಜನರ ಮೇಲೆ ಕಣ್ಣಿಡುವ ಕೆಲಸವನ್ನ ನೀಡಲಾಗುತ್ತೆ.

ವಾಷಿಂಗ್ಟನ್​ ಮೂಲದ ಸಿಸಿ ಟಿವಿ ಕಂಪನಿಯು ಲೈವ್​ ಕ್ಯಾಮರಾ ವ್ಯವಸ್ಥೆಯ ಮೂಲಕ ಅಂಗಡಿಗಳ ಮೇಲೆ ಕಣ್ಣಿಡುತ್ತದೆ. ಹಾಗೂ ಅಲ್ಲಿ ಏನಾದರೂ ಅಸಹಜವಾದದ್ದು ನಡೆಯುತ್ತಿದೆ ಎನಿಸಿದ್ರೆ ಮಧ್ಯ ಪ್ರವೇಶ ಮಾಡುವ ಕೆಲಸ ಮಾಡ್ತಿದೆ.

ಕಂಪನಿ ಜಾಹೀರಾತುಗಳಲ್ಲಿ ಇಬ್ಬರು ದರೋಡೆಕೋರರು ಅಂಗಡಿಯೊಳಕ್ಕೆ ನುಗ್ಗುತ್ತಾರೆ. ಅವರ ಕೈಯಲ್ಲಿ ರೈಫಲ್​ನಂತಹ ಆಕ್ರಮಣಕಾರಿ ಆಯುಧ ಕೂಡ ಇರುತ್ತೆ. ಅಲ್ಲಿನ ಸಿಬ್ಬಂದಿ ಇನ್ನೇನು ಹಣವನ್ನ ಕಳ್ಳರ ಕೈಗೆ ಕೊಡಬೇಕು ಅನ್ನೋವಷ್ಟರಲ್ಲಿ ಲೈವ್​ ಐ ಸಿಸ್ಟಮ್​ ಆನ್​ ಆಗುತ್ತೆ ಹಾಗೂ ದರೋಡೆಕೋರರಿಗೆ ಪೊಲೀಸರನ್ನ ಕರೆಸಲಾಗಿದೆ ಎಂಬ ಆಡಿಯೋ ಕೇಳುತ್ತದೆ. ಇದಕ್ಕೆ ಹೆದರಿದ ದರೋಡೆಕೋರರು ಓಡಿ ಹೋಗ್ತಾರೆ.

ಈ ಕಂಪನಿಯು ಈ ವಿಡಿಯೋಗಳ ಮೇಲೆ ಕಣ್ಣಿಡುವ ಕೆಲಸಕ್ಕಾಗಿ ಕರ್ನಾಲ್​, ಹರಿಯಾಣದಿಂದ ಸಿಬ್ಬಂದಿಯನ್ನ ನೇಮಕಮಾಡಿಕೊಳ್ತಿದೆ. ಈ ಕೆಲಸ ಮಾಡಿದವರಿಗೆ ಅಮೆರಿಕ ಮೂಲದ ಕಂಪನಿ ಪ್ರತಿ ತಿಂಗಳು 29,600 ರೂಪಾಯಿ ಸಂಬಳ ನೀಡುತ್ತಿದೆ.

ಈ ಕೆಲಸಕ್ಕೆ ನೇಮಕವಾಗಲು 12ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಿರಬೇಕು ಹಾಗೂ ಕಂಪ್ಯೂಟರ್​ ಬಗ್ಗೆ ಮಾಹಿತಿ ಪಡೆದಿರಬೇಕು. ಸಂವಹನ ಕೌಶಲ್ಯ ಇರಬೇಕು ಎಂದು ಕಂಪನಿ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...