ಉತ್ತರ ಪ್ರದೇಶದ ಜಾನ್ಪುರದ ಕೆರೆಯೊಂದರಲ್ಲಿ ಒಂದೇ ಕುಟುಂಬದ ಮೂರು ಮಕ್ಕಳ ದೇಹಗಳು ಪತ್ತೆಯಾಗಿವೆ. ಈ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ರಂಜೀತ್ (11), ವೀರು (12) ಮತ್ತು ಸಮೀರ್ (12) ಎಂಬ ಈ ಮಕ್ಕಳು ಇಲ್ಲಿನ ಜಹ್ರುದ್ದೀನ್ ಗ್ರಾಮದವರಾಗಿದ್ದು, ಬುಧವಾರ ಮದ್ಯಾಹ್ನ 3 ಗಂಟೆ ವೇಳೆಗೆ ಮನೆಯಿಂದ ಹೊರಗೆ ಹೋದವರು ಸಂಜೆಯಾದರೂ ಮರಳದೇ ಇದ್ದಾಗ, ಬಾಲಕರ ಕುಟುಂಬಸ್ಥರು ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆ ವೇಳೆ ಸಂಜೆ 6:30ರ ಹೊತ್ತಿಗೆ ಬಾಲಕರ ಮೃತ ದೇಹಗಳು ಪತ್ತೆಯಾಗಿವೆ.
50,000 ರೂ. ಹೂಡಿಕೆ ಮಾಡಿ 3,300 ರೂ. ಪಿಂಚಣಿ ಪಡೆಯಲು ಇಲ್ಲಿದೆ ಮಾಹಿತಿ
ಮಕ್ಕಳ ಬಂಧುಗಳು ಲಖನೌ-ಬಾಲಿಯಾ ಹೆದ್ದಾರಿಯನ್ನು ಬಂದ್ ಮಾಡಿ, ಮಕ್ಕಳ ದೇಹಗಳು ಸಿಕ್ಕ ಕೊಳ ಇರುವ ಜಮೀನಿನ ಮಾಲೀಕರ ಮೇಲೆ ಕೇಸ್ ದಾಖಲಿಸಿ ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಮನೆ ಕಟ್ಟುವವರಿಗೆ ಶಾಕಿಂಗ್ ನ್ಯೂಸ್: ಮರಳು, ಇಟ್ಟಿಗೆ, ಸ್ಟೀಲ್, ಸಿಮೆಂಟ್ ದರ ಭಾರಿ ಹೆಚ್ಚಳ
ಮಕ್ಕಳು ಮುಳುಗಿ ಸತ್ತಿರಬಹುದೆಂದು ಶಂಕಿಸಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು, ಬಾಲಕರ ಸಾವಿಗೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿಯಬೇಕಾಗಿದೆ ಎಂದಿದ್ದಾರೆ.