ಮೈಸೂರು: ಕೊರೊನಾ ಎರಡನೆ ಅಲೆಯ ರೂಪಾಂತರದ ಅಟ್ಟಹಾಸ ಆರಂಭವಾಗಿದ್ದು, ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಮೂವರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೇ ತಿಂಗಳಿನಲ್ಲಿಯೇ 20ಕ್ಕೂ ಹೆಚ್ಚು ಜನರ ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಈ ಸ್ಯಾಂಪಲ್ಸ್ ಪೈಕಿ ಮೂವರಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ. ಸದ್ಯ ಮೂವರು ಡೆಲ್ಟಾ ಪ್ಲಸ್ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಡೆಲ್ಟಾ ಪ್ಲಸ್ ವೈರಸ್ ದೇಶದಲ್ಲಿ ಮೊದಲ ಬಲಿ ಪಡೆದಿದೆ ಎಂಬ ಅನುಮಾನ ಆರಂಭವಾಗಿದೆ. ಮಧ್ಯಪ್ರದೇಶದ ಮೃತಪಟ್ಟ ಮಹಿಳೆಯೊಬ್ಬರಿಗೆ ಡೆಲ್ಟಾ ಪ್ಲಸ್ ಸೋಂಕು ಇರುವುದು ಜಿನೋಮ್ ಸೀಕ್ವೆನ್ಸಿಂಗ್ ನಲ್ಲಿ ದೃಢಪಟ್ಟಿದೆ.