alex Certify ʼಕೊರೊನಾʼ ಲಸಿಕೆ ಪಡೆದುಕೊಂಡವರಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಲಸಿಕೆ ಪಡೆದುಕೊಂಡವರಿಗೆ ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್

ಐಸಿಎಂಆರ್​ ನಡೆಸಿದ ಹೊಸ ಅಧ್ಯಯನದ ಪ್ರಕಾರ ಸಿಂಗಲ್​ ಡೋಸ್​ ಕೊರೊನಾ ಲಸಿಕೆ ಕೂಡ ಸಾವಿನ ಸಂಖ್ಯೆಯನ್ನ ಕಡಿಮೆ ಮಾಡಬಲ್ಲದು ಎಂಬ ಅಂಶ ಬಹಿರಂಗವಾಗಿದೆ. ಕೊರೊನಾ ಸಿಂಗಲ್​ ಡೋಸ್​​ ಪಡೆದರೆ 82 ಪ್ರತಿಶತ ಹಾಗೂ ಡಬಲ್​ ಡೋಸ್​​ 95 ಪ್ರತಿಶತ ಸಾವಿನ ಪ್ರಮಾಣವನ್ನ ತಡೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಸಾವಿನ ಪ್ರಮಾಣ ತಡೆಗಟ್ಟುವಲ್ಲಿ ಕೋವಿಡ್​ 19 ಲಸಿಕೆ ಪಾತ್ರ ಎಂಬ ಅಧ್ಯಯನದ ವರದಿಯನ್ನ ಇಂಡಿಯನ್​ ಜರ್ನಲ್​ ಆಫ್​ ರಿಸರ್ಚ್​ನಲ್ಲಿ ಜೂನ್​ 21ರಂದು ಪ್ರಕಟ ಮಾಡಲಾಗಿದೆ. ತಮಿಳುನಾಡು ಪೊಲೀಸ್​ ಇಲಾಖೆಯಲ್ಲಿ ಕೊರೊನಾ ಲಸಿಕೆ ಯಾವ ರೀತಿ ಕೆಲಸ ಮಾಡ್ತಿದೆ ಅನ್ನೋದನ್ನ ದಾಖಲು ಮಾಡಿಕೊಳ್ತಿದೆ. ಕೊರೊನಾ 2ನೆ ಅಲೆಯಲ್ಲಿ ಉಂಟಾದ ಸಾವು, ರೋಗಿ ಆಸ್ಪತ್ರೆಗೆ ದಾಖಲಾದ ದಿನಾಂಕ ಹಾಗೂ ಲಸಿಕೆ ದಿನಾಂಕವನ್ನ ಆಧರಿಸಿ ಈ ವರದಿಯನ್ನ ತಯಾರಿಸಲಾಗಿದೆ.

ಪೊಲೀಸ್​ ಇಲಾಖೆಯಲ್ಲಿ ಕೊರೊನಾ ಲಸಿಕೆ ಪಡೆಯದ ಹಾಗೂ ಪಡೆದವರಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಅನ್ನೋದನ್ನ ಆಧರಿಸಿ ಈ ವರದಿ ತಯಾರಿಸಲಾಗಿದೆ ಎಂದು ಐಸಿಎಂಆರ್​ – ಎನ್​ಐಇ ನಿರ್ದೇಶಕ ಡಾ. ಮನೋಜ್​​ ಮುರ್ಹೇಕರ್​​ ಹೇಳಿದ್ರು.‌

ತಮಿಳುನಾಡು ಪೊಲೀಸ್​ ಇಲಾಖೆಯಲ್ಲಿ ಒಟ್ಟು 1,17,524 ಮಂದಿ ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 1ರಿಂದ ಮೇ 4ರ ಒಳಗಾಗಿ 14, 32,792 ಮಂದಿ ಪೊಲೀಸರು ಕೊರೊನಾ ಮೊದಲ ಡೋಸ್​ ಪಡೆದಿದ್ದಾರೆ ಹಾಗೂ 67,673 ಮಂದಿ ಕೊರೊನಾ ಎರಡನೆ ಡೋಸ್​ ಪಡೆದಿದ್ದರು. ಇನ್ನುಳಿದ 17,059 ಮಂದಿ ಕೋವಿಡ್​ ಲಸಿಕೆ ಪಡೆದಿರಲಿಲ್ಲ.

ಏಪ್ರಿಲ್​ 13ರಿಂದ ಮೇ 14ರ ಒಳಗಾಗಿ ತಮಿಳುನಾಡಿನಲ್ಲಿ 31 ಮಂದಿ ಪೊಲೀಸರು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಈ 31 ಮಂದಿಯಲ್ಲಿ ನಾಲ್ವರು 2 ಡೋಸ್​ ಲಸಿಕೆ ಪಡೆದಿದ್ದರು. 7 ಮಂದಿ 1 ಡೋಸ್​ ಲಸಿಕೆ ಸ್ವೀಕರಿಸಿದ್ದರು ಹಾಗೂ ಉಳಿದ 20 ಮಂದಿ ಕೊರೊನಾ ಲಸಿಕೆಯನ್ನೇ ಪಡೆದಿರಲಿಲ್ಲ. ಈ ಲೆಕ್ಕಾಚಾರವನ್ನ ಆಧರಿಸಿ ಕೊರೊನಾ ಸಾವನ್ನ ತಡೆಗಟ್ಟುವಲ್ಲಿ ಲಸಿಕೆಯ ಪರಿಣಾಮಕರತ್ವವನ್ನ ಅಳೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...