alex Certify ʼಕೊರೊನಾʼ ಲಸಿಕೆ ಪಡೆದವರ ದೇಹ ಆಯಸ್ಕಾಂತವಾಗುತ್ತಾ..? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಲಸಿಕೆ ಪಡೆದವರ ದೇಹ ಆಯಸ್ಕಾಂತವಾಗುತ್ತಾ..? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ದೇಶದಲ್ಲಿ ಇತ್ತೀಚಿಗೆ ವರದಿಯಾದ ಕೆಲ ಪ್ರಕರಣಗಳ ಪ್ರಕಾರ ಕೊರೊನಾ ಲಸಿಕೆಯನ್ನ ಪಡೆದ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿ ಬೆಳೆಯುತ್ತದೆ. ಇದರಿಂದ ಕಬ್ಬಿಣಗಳು ದೇಹವನ್ನ ಆಕರ್ಷಿಸುವ ಸಾಮರ್ಥ್ಯ ಹೊಂದುತ್ತವೆ ಎಂದು ಹೇಳಲಾಗಿತ್ತು.

ಜಾರ್ಖಂಡ್​ನ ಹಜರಿಬಾಘ್​ ಸಿಂಗ್​, ಮಹಾರಾಷ್ಟ್ರದ ನಾಶಿಕ್​ ನಿವಾಸಿಯಾಗಿರುವ ಬೆಂಗಳೂರು ಮೂಲದ ಮಹಿಳೆ ತಮ್ಮ ದೇಹದಲ್ಲಿ ಕಾಂತೀಯ ಶಕ್ತಿ ಬೆಳೆದ ಬಗ್ಗೆ ಸಾಕ್ಷ್ಯ ಒದಗಿಸುವಂತಹ ವಿಡಿಯೋಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದರು.

ಕೋವಿಡ್​ 19 ವಿರುದ್ಧ ಹೋರಾಡಲು ಲಸಿಕೆಯೊಂದೇ ಅಸ್ತ್ರ ಎಂದು ಕೇಂದ್ರ ಸರ್ಕಾರ ಸಾರಿ ಸಾರಿ ಹೇಳುತ್ತಿರುವ ನಡುವೆಯೇ ಇಂತಹ ವಿಡಿಯೋಗಳು ಜನರಲ್ಲಿ ಲಸಿಕೆಯ ಬಗ್ಗೆ ಗೊಂದಲವನ್ನ ಸೃಷ್ಟಿ ಮಾಡಲು ಕಾರಣವಾಗಿತ್ತು.

ವೈರಲ್​ ಆಗಿರುವ ವಿಡಿಯೋಗಳ ವಿಚಾರವಾಗಿ ಟ್ವಿಟರ್​ನಲ್ಲಿ ಪ್ರಕಟಣೆ ಹೊರಡಿಸಿದ ಪತ್ರಿಕಾ ಮಾಹಿತಿ ಬ್ಯುರೋ ಕೋವಿಡ್​​ 19 ಲಸಿಕೆಯಿಂದ ಮನುಷ್ಯರು ಆಯಸ್ಕಾಂತವಾಗೋದಿಲ್ಲ. ಕೊರೊನಾ ಲಸಿಕೆಯು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ. ಹಾಗಾದರೆ ಈ ರೀತಿ ಆಗೋದಕ್ಕೆ ಕಾರಣವೇನು..? ಆಯಸ್ಕಾಂತಕ್ಕೂ ಲಸಿಕೆಗೂ ಏನಾದರೂ ಸಂಬಂಧ ಇದೆಯಾ..? ಇದಕ್ಕೆ ಸರಿಯಾದ ಉತ್ತರ ಇಲ್ಲ ಎಂದೇ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...