ಜಮಖಂಡಿ: ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗಿದೆ ಪಂಚಮಸಾಲಿ ಸಮಾಜದ ಹರಿಹರ ಮತ್ತು ಕೂಡಲಸಂಗಮ ಪೀಠಗಳ ಹೊರತಾಗಿ ಮತ್ತೊಂದು ಪೀಠ ಸ್ಥಾಪನೆ ಕುರಿತಂತೆ ಮೂವತ್ತಕ್ಕೂ ಹೆಚ್ಚು ಸ್ಥಾನ ಸ್ವಾಮೀಜಿಗಳು ಜಮಖಂಡಿಯಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದ್ದಾರೆ.
ಸಮಾಜದ ಒಳಿತಿನ ಉದ್ದೇಶದಿಂದ ರಾಜಕೀಯ ಹೊರತಾದ ಧಾರ್ಮಿಕ ನೆಲೆಗಟ್ಟಿನ ಪೀಠ ಸ್ಥಾಪನೆಗೆ ಸಾಮೂಹಿಕ ನಿರ್ಧಾರ ಕೈಗೊಳ್ಳಲಾಗಿದೆ. ಈಗಿರುವ ಎರಡು ಪೀಠಗಳಿಂದ ಸಮಾಜದ ಅಭಿವೃದ್ಧಿಯಾಗದೆ ರಾಜಕೀಯವೇ ಪ್ರಾಮುಖ್ಯ ಪಡೆದುಕೊಂಡಿದೆ. ಸ್ವಾಮೀಜಿಗಳು ರಾಜಕೀಯದಿಂದ ದೂರವಿದ್ದು, ಸಮಾಜವನ್ನು ಮುನ್ನಡೆಸಬೇಕಿದೆ. ಸಮಾಜದ ಕೆಲವೇ ಕೆಲವು ರಾಜಕೀಯ ಮುಖಂಡರನ್ನು ಮಾತ್ರ ಕೆಲವು ಪೀಠಗಳು ಪರಿಗಣಿಸುತ್ತೇವೆ ಎಂದು ಹೇಳಲಾಗಿದ್ದು, ಸಮಾಜದ ಮಠಾಧೀಶರು ಸಾಮೂಹಿಕವಾಗಿ ಮೂರನೇ ಪೀಠ ಸ್ಥಾಪನೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.