ನವದೆಹಲಿ: ಈಗಲೇ ಶಾಲೆಗಳನ್ನು ಆರಂಭಿಸಿದರೆ ಕೊರೊನಾ ಸೋಂಕು ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಶಾಲೆ ಆರಂಭಿಸುವ ಮೊದಲು ಮೂರ್ನಾಲ್ಕು ಇಲಾಖೆಗಳೊಂದಿಗೆ ಚರ್ಚಿಸಿ ನಿರ್ಧರಿಸಬೇಕಿದೆ ಎಂದು ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್ ಅಭಿಪ್ರಾಯ ಪಟ್ಟಿದ್ದಾರೆ.
ಗ್ರಾಮೀಣ ಜನತೆಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್, 25 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ
ಶಾಲೆಗಳಲ್ಲಿ ಮಕ್ಕಳು ಪರಸ್ಪರ ಹತ್ತಿರದಲ್ಲಿ ಕುಳಿತುಕೊಳ್ಳುತ್ತಾರೆ. ಅಲ್ಲದೇ ಶಾಲೆಗಳು ಜನದಟ್ಟಣೆಯಿರುವ ಪ್ರದೇಶವಾಗಿದೆ ಹೀಗಾಗಿ ಈಗಲೇ ಶಾಲೆಗಳನ್ನು ತೆರೆಯುವುದು ಬೇಡ. ದೇಶದಲ್ಲಿ ಜನರು ಗಣನೀಯ ಪ್ರಮಾಣದಲ್ಲಿ ಲಸಿಕೆಗಳನ್ನು ಪಡೆದಾಗ ಶಾಲೆ ತೆರೆಯುವ ನಿರ್ಧಾರ ಕೈಗೊಳ್ಳಬಹುದು ಎಂದಿದ್ದಾರೆ.
ಕರುನಾಡಿಗೂ ಕಾಲಿಟ್ಟ ಡೆಲ್ಟಾ ಪ್ಲಸ್; ಮೈಸೂರಿನಲ್ಲಿ ಪತ್ತೆಯಾಯ್ತು B.1.617.2 ವೈರಸ್
ಹೊಸ ಲಸಿಕಾ ನೀತಿ ಜಾರಿಯಾದ ಬಳಿಕ ಒಂದೇ ದಿನದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಇದೇ ಶ್ರಮವನ್ನು ರಾಜ್ಯಗಳೂ ಮುಂದುವರೆಸಿದಾಗ ಗ್ರಾಮೀಣ ಭಾಗದ ಜನರಿಗೂ ಶೀಘ್ರವಾಗಿ ಲಸಿಕೆ ಸಿಗುತ್ತದೆ ಎಂದರು.
ಇದೇ ವೇಳೆ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆಯ ಡಾ.ರಾಜೇಶ್ ಭೂಷಣ್, ಜೂನ್ 21ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯತೆಯಿಂದ 88 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.63ರಷ್ಟು, ನಗರ ಪ್ರದೇಶಗಳಲ್ಲಿ ಶೇ.36.3 ಲಸಿಕೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.