ನವದೆಹಲಿ: ಪಾನ್ ಕಾರ್ಡ್ ಗೆ ಆಧಾರ್ ಸಂಖ್ಯೆ ಜೋಡಣೆ ಮಾಡದವರಿಗೆ ಮುಂದಿನ ತಿಂಗಳಿಂದ ವೇತನ ಬರುವುದು ಅನುಮಾನವೆನ್ನಲಾಗಿದೆ.
ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆ ಮಾಡದಿದ್ದರೆ, ಮುಂದಿನ ತಿಂಗಳಿನಿಂದ ವೇತನ ಕಡಿತವಾಗಬಹುದು. ಆದಾಯ ತೆರಿಗೆ ಇಲಾಖೆ ಪಾನ್ -ಆಧಾರ್ ಕಾರ್ಡ್ ಜೋಡಣೆಗೆ ಸಂಬಂಧಿಸಿದಂತೆ ಕ್ರಮಕೈಗೊಂಡಿದ್ದು, ಜೂನ್ 30 ರೊಳಗೆ ಪಾನ್ -ಆಧಾರ್ ಕಡ್ಡಾಯವಾಗಿ ಜೋಡಣೆ ಮಾಡಲು ಸಮಯ ನಿಗದಿ ಮಾಡಲಾಗಿದೆ.
ಎಲ್ಲ ಉದ್ಯೋಗಿಗಳು ತಮ್ಮ ಖಾತೆಗೆ ಪಾನ್ ಆಧಾರ್ ಜೋಡಣೆ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವಂತೆ ಕಂಪನಿಗಳು ತಿಳಿಸಿದ್ದು, ಪಾನ್ ಕಾರ್ಡ್ ನೊಂದಿಗೆ ಆಧಾರ್ ಜೋಡಣೆಯಾಗದ ಉದ್ಯೋಗಿಗಳಿಗೆ ವೇತನ ಜಮಾ ಮಾಡುವುದಿಲ್ಲ ಎಂದು ಹೇಳಲಾಗಿದೆ. ಆಧಾರ್ ಜೋಡಣೆಯಾಗದ ಪಾನ್ ಕಾರ್ಡ್ ಗಳನ್ನು ನಿಷ್ಕ್ರಿಯ ಎಂದು ಘೋಷಿಸಲಾಗುತ್ತದೆ. ವೇತನವನ್ನೂ ಕಡಿತ ಮಾಡಬಹುದಾಗಿದೆ ಎನ್ನಲಾಗಿದೆ.