alex Certify ಅಳಿವಿನಂಚಿನಲ್ಲಿರುವ ಘರಿಯಲ್​ ಮರಿಗಳು 43 ವರ್ಷಗಳ ಬಳಿಕ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿವಿನಂಚಿನಲ್ಲಿರುವ ಘರಿಯಲ್​ ಮರಿಗಳು 43 ವರ್ಷಗಳ ಬಳಿಕ ಪತ್ತೆ..!

ಅಳಿವಿನಂಚಿನಲ್ಲಿರುವ ಮೀನು ತಿನ್ನುವ ಮೊಸಳೆ ಅಥವಾ ಘರಿಯಲ್​​​ಗಳು ಬರೋಬ್ಬರಿ 43 ವರ್ಷಗಳ ಬಳಿಕ ಓಡಿಶಾದ ಮಹಾನದಿ ಬಳಿಯಲ್ಲಿ ಪತ್ತೆಯಾಗಿವೆ.

ಈ ಬಗ್ಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುವೇಂದು ಬೆಹೆರಾ, ಮೇ ತಿಂಗಳಲ್ಲಿ ಮೊಟ್ಟೆಯಿಂದ ಹೊರಬಂದ ಸುಮಾರು 28 ಘರಿಯಲ್​ ಮಹಾನದಿ ಬಳಿಯಲ್ಲಿ ಪತ್ತೆ ಮಾಡಿದ್ದೆವು. ಡ್ರೋನ್​ ಹಾಗೂ ಸಿಸಿ ಕ್ಯಾಮರಾಗಳನ್ನ ಬಳಸಿ ಈ ಮರಿಗಳ ಮೇಲೆ ಕಣ್ಣಿಡಲಾಗಿದೆ. ಮೊಸಳೆಯ ಜಾತಿಗೆ ಸೇರಿದ ಈ ಘರಿಯಲ್​ ಪ್ರಭೇಧಗಳು ಅಳಿವಿನಂಚಿಗೆ ಸೇರಿವೆ ಎಂದು ಹೇಳಿದ್ದಾರೆ.

ಓಡಿಶಾದಲ್ಲಿ ಮಾತ್ರ ನೀವು ಸಿಹಿ ನೀರಿನ ಘರಿಯಲ್​, ಮಗರ್ಸ್ ಹಾಗೂ ಉಪ್ಪು ನೀರಿನ ಮೊಸಳೆಗಳನ್ನ ಕಾಣಬಹುದಾಗಿದೆ ಎಂದು ಬೆಹೆರಾ ಮಾಹಿತಿ ನೀಡಿದ್ದಾರೆ.

1930ರಿಂದ ಕೈಗಾರಿಕೋದ್ಯಮವು ಬೆಳೆಯುತ್ತಾ ಹೋದಂತೆ ಘರಿಯಲ್​ಗಳು ವಿನಾಶದ ಅಂಚಿಗೆ ಸೇರಿದವು. ನದಿ ತೀರ ಸವೆತ, ಮರಳು ಗಣಿಗಾರಿಕೆ, ಮೀನುಗಾರಿಕೆ ಹಾಗೂ ಅಣೆಕಟ್ಟುಗಳ ನಿರ್ಮಾಣದಿಂದಾಗಿ ಘರಿಯಲ್​ಗಳು ಅಳಿವಿನಂಚಿಗೆ ಸೇರಲು ಪ್ರಮುಖ ಕಾರಣವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...