alex Certify ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರೀನ್ ಫಂಗಸ್ ಲಕ್ಷಣವೇನು….? ಯಾರನ್ನು ಹೆಚ್ಚು ಕಾಡಲಿದೆ ಈ ಶಿಲೀಂಧ್ರ…? ಇಲ್ಲಿದೆ ವಿವರ

ಕೊರೊನಾ ವೈರಸ್ ಎರಡನೇ ಅಲೆ ಮಾರಕವಾಗಿದೆ. ಎರಡನೇ ಅಲೆಯಲ್ಲಿ ಕಪ್ಪು, ಬಿಳಿ, ಹಳದಿ ಶಿಲೀಂಧ್ರಗಳ ಅನೇಕ ಪ್ರಕರಣಗಳು ವರದಿಯಾಗಿವೆ. ಕೋವಿಡ್ -19 ರಿಂದ ಚೇತರಿಸಿಕೊಂಡ ಜನರಲ್ಲಿ ಈ ಪ್ರಕರಣಗಳು ಕಂಡುಬಂದಿವೆ. ಈ ಎಲ್ಲ ಫಂಗಸ್ ಜೊತೆ ಈಗಾಗಲೇ ಗ್ರೀನ್ ಫಂಗಸ್ ಪತ್ತೆಯಾಗಿದೆ. ಕೊರೊನಾದಿಂದ ಚೇತರಿಸಿಕೊಂಡ ಜನರಲ್ಲಿಯೇ ಈ ಫಂಗಸ್ ಕಾಣಿಸಿಕೊಂದಿದೆ.

ಆಸ್ಪರ್ಜಿಲೊಸಿಸ್ ಎಂದು ಕರೆಯಲ್ಪಡುವ ಗ್ರೀನ್ ಫಂಗಸ್ ಗೆ ಸಂಬಂಧಿಸಿದಂತೆ, ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ. ಇದು ಸಾಮಾನ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ. ತಜ್ಞರ ಪ್ರಕಾರ, ಈ ಫಂಗಸ್, ಮನೆಯಲ್ಲಿ ಮತ್ತು ಹೊರಗಡೆ ಪರಿಸರದಲ್ಲಿ ಇರುತ್ತದೆ. ಇದು ಅನೇಕ ಬಾರಿ ಉಸಿರಾಟದ ಮೂಲಕ ಜನರ ದೇಹವನ್ನು ತಲುಪುತ್ತದೆ. ಆದರೆ ಪ್ರತಿ ಬಾರಿಯೂ ಜನರು ಕಾಯಿಲೆಗೆ ಒಳಗಾಗುವುದಿಲ್ಲ.

ರೋಗನಿರೋಧಕ ಶಕ್ತಿ ಹೆಚ್ಚಿರುವ ಜನರು ಕಾಯಿಲೆಗೆ ಒಳಗಾಗುವುದಿಲ್ಲ. ಆದರೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಸೋಂಕಿಗೆ ಒಳಗಾಗುತ್ತಾರೆ. ಯುಎಸ್ ಸಿಡಿಸಿ ಪ್ರಕಾರ, ಗ್ರೀನ್ ಫಂಗಸ್, ಸಾಮಾನ್ಯವಾಗಿ ಟಿಬಿ ಮತ್ತು ಇತರ ಶ್ವಾಸಕೋಶದ ಕಾಯಿಲೆ ಇರುವ ಜನರಲ್ಲಿ ಹೆಚ್ಚು ಕಂಡುಬರುತ್ತದೆ. ಅಸ್ತಮಾ, ಸಿಒಪಿಡಿಯಿಂದ ಬಳಲುತ್ತಿರುವ ಜನರಲ್ಲಿ ಇದರ ಅಪಾಯ ಹೆಚ್ಚು. ಅಂಗಾಂಗ ಕಸಿ ಮಾಡಿದವರು, ಹೆಚ್ಚಿನ ಪ್ರಮಾಣದಲ್ಲಿ ಸ್ಟೀರಾಯ್ಡ್ ಗಳನ್ನು ತೆಗೆದುಕೊಳ್ಳುವವರು ಅಥವಾ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರು ಇದಕ್ಕೆ ಒಳಗಾಗ್ತಾರೆ.

ಗ್ರೀನ್ ಫಂಗಸ್, ಶ್ವಾಸಕೋಶ ಅಥವಾ ಸೈನಸ್‌ಗಳ ಮೇಲೆ ಪರಿಣಾಮ ಬೀರಲಿದೆ. ಶೀಘ್ರದಲ್ಲೇ ಚಿಕಿತ್ಸೆ ನೀಡದಿದ್ದರೆ  ನ್ಯುಮೋನಿಯಾಕ್ಕೂ ಕಾರಣವಾಗಬಹುದು. ಗ್ರೀನ್ ಫಂಗಸ್ ಇಂದ ಬಳಲುತ್ತಿರುವ ಅನೇಕ ರೋಗಿಗಳಲ್ಲಿ ಕೆಮ್ಮು, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಕಂಡುಬಂದಿವೆ. ಜ್ವರ ಮತ್ತು ಮೂಗಿನಿಂದ ರಕ್ತಸ್ರಾವವಾಗುತ್ತದೆ. ಅನೇಕ ರೋಗಿಗಳಲ್ಲಿ  ತೂಕ ಇಳಿಕೆ, ಸುಸ್ತು ಕಾಣಿಸಿಕೊಂಡಿದೆ. ವಾಸನೆ ಸಾಮರ್ಥ್ಯದ ಮೇಲೂ ಪರಿಣಾಮ ಬೀರಿದೆ. ಆಯಾಸ, ತಲೆನೋವು, ಎದೆ ನೋವು, ಮೂತ್ರದಲ್ಲಿ ರಕ್ತ ಇದು ಕೂಡ ಗ್ರೀನ್ ಫಂಗಸ್ ಲಕ್ಷಣವಾಗಿದೆ. ಗ್ರೀನ್ ಫಂಗಸ್ ಸೋಂಕಾಗಿದ್ದರೂ ಅದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಧೂಳು ಹಾಗೂ ನೀರು ನಿಂತಿರುವ ಜಾಗವನ್ನು ಸ್ವಚ್ಛಗೊಳಿಸುವ ಮೊದಲು ಮಾಸ್ಕ್ ಧರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...