ನವದೆಹಲಿ: ಹೊಸ ಕಾರು ಖರೀದಿಸಬೇಕೆಂದುಕೊಂಡವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಕಾರುಗಳ ದರ ಏರಿಕೆಯಾಗಲಿದ್ದು, ವಾಹನಗಳ ಉತ್ಪಾದನೆ ವೆಚ್ಚ ಗಣನೀಯ ಏರಿಕೆಯಾದ ಹಿನ್ನೆಲೆಯಲ್ಲಿ ದರ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ.
ಯಾವ ಕಾರ್ ಗಳ ಬೆಲೆ ಏರಿಕೆಯಾಗಲಿದೆ ಎಂದು ತಿಳಿಸಿಲ್ಲವಾದರೂ, ಮಾಡೆಲ್ ಗಳ ಮೇಲೆ ದರ ಹೆಚ್ಚಳ ಭಿನ್ನವಾಗಿರುತ್ತದೆ. ಈ ವರ್ಷದಲ್ಲಿ ನಾಲ್ಕನೇ ಬಾರಿಗೆ ಕಾರ್ಗಳ ಬೆಲೆ ಏರಿಕೆ ಆಗಲಿದೆ. ಹಳೆ ದರದಲ್ಲಿ ಕಾರು ಮಾರಾಟ ಮಾಡುವುದು ಅಸಾಧ್ಯವಾಗಿದೆ ಎಂದು ಹೇಳಲಾಗಿದೆ.