
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಐಆರ್ಸಿಟಿಸಿ ವಕ್ತಾರ ಈ ಹೊಸ ವ್ಯವಸ್ಥೆಯಿಂದಾಗಿ ಪ್ರಯಾಣಿಕರಿಗೆ ತತ್ಕಾಲ್ ಹಾಗೂ ರೆಗ್ಯೂಲರ್ ಟಿಕೆಟ್ಗಳನ್ನ ತ್ವರಿತವಾಗಿ ಕಾಯ್ದಿರಿಸೋಕೆ ಸಾಧ್ಯವಾಗುತ್ತದೆ. ಐಆರ್ಸಿಟಿಸಿ ಐ ಪೇ ಮೂಲಕ ತ್ವರಿತವಾಗಿ ಟಿಕೆಟ್ ಬುಕ್ ಆಗುವಂತೆ ವೆಬ್ಸೈಟ್ನ್ನು ನವೀಕರಿಸಿದ್ದೇವೆ ಎಂದು ಹೇಳಿದ್ರು.
ಆರ್ಐಸಿಟಿ ಐ ಪೇ ಮೂಲಕ ಟಿಕೆಟ್ ಬುಕ್ ಮಾಡುವ ವಿಧಾನ ಇಲ್ಲಿದೆ ನೋಡಿ :
ಐಆರ್ಸಿಟಿಸಿ ವೆಬ್ಸೈಟ್ನ್ನು ಓಪನ್ ಮಾಡಿ (www.irctc.co.in)
ಪ್ರಯಾಣ ಸಂಬಂಧಿ ಎಲ್ಲಾ ಮಾಹಿತಿಗಳನ್ನ ಒದಗಿಸಿ
ನಿಮ್ಮ ಮಾರ್ಗಕ್ಕೆ ಹೊಂದಿಕೆಯಾಗುವ ರೈಲನ್ನು ಆಯ್ಕೆ ಮಾಡಿ
ನಿಮ್ಮ ದಾಖಲೆಗಳನ್ನ ನೀಡಿ ವೆಬ್ಸೈಟ್ಗೆ ಲಾಗಿನ್ ಆಗಿ
ಪ್ರಯಾಣಿಕರ ಮಾಹಿತಿಯನ್ನ ಒದಗಿಸಿ
ಪಾವತಿಯ ಮಾರ್ಗವನ್ನ ಆಯ್ಕೆ ಮಾಡಿ. ಇಲ್ಲಿ ನೀವು ಐಆರ್ಸಿಟಿಸಿ ಐ ಪೇ ಆಯ್ಕೆಯನ್ನ ಕ್ಲಿಕ್ ಮಾಡಿ
ಪೇ & ಬುಕ್ ಆಯ್ಕೆಯನ್ನ ಒತ್ತಿರಿ .