ಒಂದು ತಿಂಗಳಿಗಿಂತಲೂ ಹೆಚ್ಚಿನ ಅವಧಿಯಿಂದ ನಿರುದ್ಯೋಗಿಗಳಾಗಿರುವ ತನ್ನ ಚಂದಾದಾರರ ನೆರವಿಗೆ ಬಂದಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಓ), ಹಿಂದಿರಿಗಿಸದೇ ಇರಬಲ್ಲ ಮುಂಗಡವನ್ನು ತಂತಮ್ಮ ಖಾತೆಗಳಿಂದ ಹಿಂಪಡೆಯಲು ಅವಕಾಶ ಕೊಟ್ಟಿದೆ.
ಚಂದಾದಾರರು ತಮ್ಮ ಪಿಎಫ್ ಖಾತೆಗಳಲ್ಲಿರುವ ಒಟ್ಟಾರೆ ಮೊತ್ತದ 75%ರಷ್ಟನ್ನು ಮುಂಗಡದ ರೂಪದಲ್ಲಿ ಪಡೆಯಬಹುದಾಗಿದೆ ಎಂದು ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ಇಪಿಎಫ್ಓ ತಿಳಿಸಿದೆ. ಈ ಮೂಲಕ ತನ್ನ ಚಂದಾದಾರರಿಗೆ ಆರ್ಥಿಕ ನೆರವು ನೀಡಲು ಮುಂದಾಗಿರುವ ಇಪಿಎಫ್ಓ, ಇದೇ ವೇಳೆ ಅವರಿಗೆ ತಂತಮ್ಮ ಪಿಂಚಣಿ ಸದಸ್ಯತ್ವ ಇಟ್ಟುಕೊಳ್ಳಲು ಅವಕಾಶ ಕೊಟ್ಟಿದೆ.
ಕೋವಿಡ್-19 ಮುಂಗಡದ 2ನೇ ನಾನ್-ರಿಫಂಡಬಲ್ ಕಂತನ್ನು ಪಡೆದುಕೊಳ್ಳಲು ಇಪಿಎಫ್ಓ ಇದೇ ಮೇನಲ್ಲಿ ಅನುಮತಿ ಕೊಟ್ಟಿತ್ತು.