ವ್ಯವಸ್ಥಿತಿ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ನೀವು ಮ್ಯೂಚುವಲ್ ಫಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಿದ್ದೀರಾ…? ಹೌದಾದದಲ್ಲಿ, ಜೂನ್ 30ರ ಒಳಗೆ ನೀವು ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕಿಂಗ್ ಮಾಡದೇ ಇದ್ದಲ್ಲಿ, ನಿಮ್ಮ ಮ್ಯೂಚುವಲ್ ಫಂಡ್‌ಗಳು ನಿಲ್ಲಲಿವೆ.
ನಿಮ್ಮ ಪಾನ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡದೇ ಇದ್ದಲ್ಲಿ, ನಿಮ್ಮ ಕೆವೈಸಿ ಪೂರ್ಣಗೊಳ್ಳದೇ ಇರುವ ಕಾರಣ ನಿಮ್ಮ ಎಸ್‌ಐಪಿ ಅಪೂರ್ಣವಾಗಲಿದೆ. ಅಲ್ಲದೇ ಆದಾಯ ತೆರಿಗೆ ಕಾಯಿದೆ ಪ್ರಕಾರ ನೀವು 10,000 ರೂ. ದಂಡವನ್ನೂ ಪಾವತಿ ಮಾಡಬೇಕಾಗುತ್ತದೆ.
ಇದಕ್ಕೆ ನೀವು ಮಾಡಬೇಕಾದ ಐದು ಸರಳ ಕ್ರಿಯೆಗಳು ಇಂತಿವೆ:
ಹೆಜ್ಜೆ 1: www.incometax.gov.in ಪೋರ್ಟಲ್‌ಗೆ ಭೇಟಿ ಕೊಡಿ.
ಹೆಜ್ಜೆ 2: ಅಲ್ಲಿ ನೋಂದಣಿಯಾಗಿ (ಈ ಮುಂಚೆ ಆಗಿಲ್ಲವೆಂದರೆ). ನಿಮ್ಮ ಪಾನ್ ಸಂಖ್ಯೆ ನಿಮ್ಮ ಬಳೆದಾರರ ಐಡಿ ಆಗಿರಲಿದೆ.
ಹೆಜ್ಜೆ 3: ಬಳೆದಾರರ ಐಡಿ, ಪಾಸ್‌ವರ್ಡ್ ಹಾಗೂ ನಿಮ್ಮ ಜನ್ಮದಿನಾಂಕವನ್ನು ಎಂಟರ್ ಮಾಡಿ ಲಾಗಿನ್ ಆಗಿ.
ಹೆಜ್ಜೆ 4: ಪಾಪ್ ಅಪ್ ವಿಂಡೋದಲ್ಲಿ, ನಿಮ್ಮ ಪಾನ್ ಹಾಗೂ ಆಧಾರ್ ಲಿಂಕ್ ಮಾಡುವ ಆಯ್ಕೆ ಬರುತ್ತದೆ. ಇಲ್ಲವಾದಲ್ಲಿ, ‘our services’ ಆಯ್ಕೆಗೆ ಹೋಗಿ ಅಲ್ಲಿ ‘Link Aadhaar’ ಕ್ಲಿಕ್ ಮಾಡಿ.
ಹೆಜ್ಜೆ 5: ಪಾನ್ ವಿವರಗಳನ್ನು ಆಧರಿಸಿ ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ ಹಾಗೂ ಇನ್ನಿತರ ಮಾಹಿತಿಗಳನ್ನು ಮುಂಚೆಯೇ ನಮೂದಿಸಲಾಗಿರುತ್ತದೆ.