ಯಾವುದೇ ಶಾಸನಬದ್ಧ ಕ್ರಿಯೆಗೂ ಇಂದು ಆಧಾರ್ ಕಾರ್ಡ್ ಕಡ್ಡಾಯವೆಂಬಂತೆ ಆಗಿಬಿಟ್ಟಿದೆ. ಒಂದು ವೇಳೆ ನೀವು ನಿಮ್ಮ ಖಾಯಂ/ತಾತ್ಕಾಲಿಕ ವಿಳಾಸದ ವಿವರಗಳನ್ನು ಆಧಾರ್ ಕಾರ್ಡ್ ಮೇಲೆ ಬದಲಿಸಲು ಇಚ್ಛಿಸಿದರೆ ಕೆಳಕಂಡ ಕ್ರಮಗಳನ್ನು ಅನುಸರಿಸಿ:
1. ssup.uidai.gov.in/ssup/ ಪೋರ್ಟಲ್ಗೆ ಭೇಟಿ ಕೊಡಿ.
2. ‘Proceed to Update Aadhaar’ ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಿಮ್ಮ 12-ಅಂಕಿಯ ಆಧಾರ್ ಐಡಿ ಮೂಲಕ ಲಾಗಿನ್ ಆಗಿ, ನಿಮ್ಮ ವಿವರಗಳನ್ನು ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ಕೋಡ್ ಮೂಲಕ ಖಾತ್ರಿ ಪಡಿಸಿ.
4. ಇದಾದ ಮೇಲೆ ನೀವು ‘Send OTP’ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಧಾರ್-ನೋಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರಲಿದೆ.
5. ಓಟಿಪಿ ಎಂಟರ್ ಮಾಡುವ ಮೂಲಕ ಪೋರ್ಟಲ್ಗೆ ಲಾಗಿನ್ ಆಗಿ.
6. ‘Edit Address’ ಆಯ್ಕೆಯನ್ನು ಕ್ಲಿಕ್ ಮಾಡಿ.
7. ವಿಳಾಸದ ವಿವರಗಳನ್ನು ಎಂಟರ್ ಮಾಡಿದ ಬಳಿಕ ನಿಮ್ಮ ವಿಳಾಸದ ಸಾಕ್ಷಿ ಹಾಗೂ ಹೊಸ ವಿಳಾಸವನ್ನು ಎಂಟರ್ ಮಾಡಿ.
8. ‘Submit’ ಆಯ್ಕೆಯನ್ನು ಕ್ಲಿಕ್ ಮಾಡಿ. ಇದಾದ ಕೂಡಲೇ ನಿಮ್ಮ ಆಧಾರ್ ಕಾರ್ಡ್ ವಿಳಾಸ ಬದಲಾಗಲಿದೆ.