ಬೆಂಗಳೂರು: ಅನ್ಲಾಕ್ 2.0 ಜಿಲ್ಲೆಗಳ ಪಟ್ಟಿಗೆ ಧಾರವಾಡ ಜಿಲ್ಲೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಕುರಿತಾಗಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಹುಬ್ಬಳ್ಳಿ-ಧಾರವಾಡಕ್ಕೆ ಅನ್ಲಾಕ್ 2.0 ಅನ್ವಯವಾಗಲಿದೆ. ಪಾಸಿಟಿವಿಟಿ ದರ ಶೇಕಡ 5 ಕ್ಕಿಂತ ಕಡಿಮೆ ಇದ್ದರೂ ಧಾರವಾಡ ಜಿಲ್ಲೆಯನ್ನು ಅನ್ ಲಾಕ್ ಜಿಲ್ಲೆಗಳ ಪಟ್ಟಿಗೆ ಸೇರಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಅವರು ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಶೇಕಡ 5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇದ್ದ ಕಾರಣ ಧಾರವಾಡ ಜಿಲ್ಲೆಯನ್ನೂ ಅನ್ ಲಾಕ್ ಮಾಡಲಾಗಿದೆ. ಸಚಿವ ಜಗದೀಶ್ ಶೆಟ್ಟರ್ ಮನವಿಗೆ ಸ್ಪಂದಿಸಿ ಸಿಎಂ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.