ಭೋಪಾಲ್: ಮಧ್ಯಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ವಿವಾಹಿತೆ ಮನೆಗೆ ನುಗ್ಗಿದ್ದ, ಬಾಲಕನೊಬ್ಬ ಅತ್ಯಾಚಾರ ಎಸಗಿದ್ದು, ಪ್ರಕರಣ ದಾಖಲಿಸಲಾಗಿದೆ.
ಭೋಪಾಲ್ ನಜೀರಾಬಾದ್ ಪ್ರದೇಶದಲ್ಲಿರುವ ತನ್ನ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು 25 ವರ್ಷದ ಮಹಿಳೆ ಬಾಲಕನ ವಿರುದ್ಧ ದೂರು ನೀಡಿದ್ದಾಳೆ. ಸಂಬಂಧಿತ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕ ಎಂದು ಹೇಳಲಾಗಿರುವ ಹುಡುಗನ ವಯಸ್ಸಿನ ದಾಖಲೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.
ವಿಕಲಚೇತನ ಕೃಷಿ ಕಾರ್ಮಿಕನನ್ನು ಮಹಿಳೆ ಮದುವೆಯಾಗಿದ್ದು, ದಂಪತಿಗೆ ಒಬ್ಬ ಪುತ್ರಿ ಇದ್ದಾಳೆ. ಮನೆಯಲ್ಲಿ ಒಂಟಿಯಾಗಿದ್ದ ವೇಳೆಯಲ್ಲಿ ಅವರ ಸಂಬಂಧಿಯೇ ಆಗಿರುವ ಮನೆಯ ಸಮೀಪದಲ್ಲಿ ವಾಸವಿದ್ದ ಹುಡುಗ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕುಟುಂಬ ಸದಸ್ಯರು ಮನೆಗೆ ಹಿಂತಿರುಗಿದ ನಂತರ ಮಹಿಳೆ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದು, ಬಳಿಕ ಪೊಲೀಸರು ದೂರು ನೀಡಲಾಗಿದೆ.