ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕ ಕೋವಿಡ್ ನೆಗೆಟಿವ್ ಬಂದರೂ ಕೂಡ ಕೆಲದಿನಗಳಲ್ಲೇ ಸೋಂಕಿತರು ಸಾವನ್ನಪ್ಪುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಆತಂಕಕಾರಿ ಬೆಳವಣಿಗಳು ನಡೆಯಲು ಕಾರಣವೇನು…? ಕೊರೊನಾ ನೆಗೆಟಿವ್ ಬಂದಿದ್ದರೂ ಸಾವನ್ನಪ್ಪುತ್ತಿರುವುದೇಕೆ ಎಂಬ ಬಗ್ಗೆ ಡಾ. ರಾಜು ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ನಾಳೆಯಿಂದ ದೇಶಾದ್ಯಂತ ಉಚಿತ ಲಸಿಕೆ ಅಭಿಯಾನ, ಕೋ-ವಿನ್‌ನಲ್ಲಿ ಪೂರ್ವ ನೋಂದಣಿ ಕಡ್ಡಾಯವಲ್ಲ..!
ಕೋವಿಡ್ ಪಾಸಿಟಿವ್ ಬಂದಿದೆ ಎಂದು ಆತಂಕಪಡಬೇಕಿಲ್ಲ, ಹಾಗೇ ಕೋವಿಡ್ ನೆಗೆಟಿವ್ ಎಂದು ಸಂಭ್ರಮಿಸುವ ಅಗತ್ಯವೂ ಇಲ್ಲ. ನಮ್ಮ ಆರೋಗ್ಯವನ್ನು ನಿರ್ಧರಿಸುವುದು ಯಾವುದೇ ಟೆಸ್ಟ್ ಗಳ ಮೇಲಲ್ಲ ಬದಲಾಗಿ ನಮಗಿರುವ ರೋಗದ ಲಕ್ಷಣಗಳ ಮೇಲೆ. ಹಾಗಾಗಿ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಉಸಿರಾಟದ ತೊಂದರೆ, ಸ್ಯಾಚುರೇಷನ್ ಲೆವಲ್ ಕಡಿಮೆಯಾದಲ್ಲಿ ಮಾತ್ರ ವೈದ್ಯರನ್ನು ಸಂಪರ್ಕಿಸಿ. ಅಂತೆಯೇ ಕೊರೊನಾ ನೆಗೆಟಿವ್ ಎಂದು ಮೈಮರೆಯುವುದು ತಪ್ಪು.
ಶಾಕಿಂಗ್: ಒಂಟಿಯಾಗಿದ್ದ ವಿವಾಹಿತೆ ಮನೆಗೆ ನುಗ್ಗಿದ ಸಂಬಂಧಿ ಹುಡುಗನಿಂದ ಆಘಾತಕಾರಿ ಕೃತ್ಯ
ಕೋವಿಡ್ ನಿಯಮಗಳನ್ನು ಪಾಲಿಸಿ, ಮುಂಜಾಗೃತೆಯಿಂದಿರಿ. ಕೋವಿಡ್ ಪಾಸಿಟಿವ್ ಬಂದು ನಂತರ ನೆಗೆಟಿವ್ ಬಂದ ಬಳಿಕ ವೈದ್ಯರು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಿಲ್ಲ. ವೈದ್ಯಕೀಯ ವ್ಯವಸ್ಥೆಯಲ್ಲಿನ ಈ ವಿಫಲತೆಯೇ ಇಂದು ನೆಗೆಟಿವ್ ಬಂದರೂ ವ್ಯಕ್ತಿ ಸಾವನ್ನಪ್ಪಲು ಕಾರಣವಾಗಿದೆ ಎಂದು ಡಾ. ರಾಜು ಕಳವಳ ವ್ಯಕ್ತಪಡಿಸಿದ್ದಾರೆ. ಡಾ.ರಾಜು ಅವರ ಈ ಹೊಸ ವಿಡಿಯೋ ನೋಡಿ ನೀವೂ ನಿಮ್ಮ ಅಭಿಪ್ರಾಯ ತಿಳಿಸಿ.
https://www.youtube.com/watch?v=wO4z5hzc8ZA