ಬೆಳಗಾವಿ: ಪತ್ನಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಲೈಂಗಿಕ ದೌರ್ಜನ್ಯ ಪ್ರಕರಣ; ಮಾಜಿ ಸಚಿವ ಮಣಿಕಂಠನ್ ಅರೆಸ್ಟ್
ಮನೆಯಲ್ಲಿ ನೇಣುಬಿಗಿದುಕೊಂಡು ತಂದೆ ಕಾಡಪ್ಪ (47) ಪುತ್ರಿಯರಾದ ಕೀರ್ತಿ (20 )ಹಾಗೂ ಸ್ಫೂರ್ತಿ (18) ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾರದ ಹಿಂದೆ ಕಾಡಪ್ಪ ಪತ್ನಿ ಚನ್ನವ್ವ ರಂಗಾಪುರೆ ಸಾವನ್ನಪ್ಪಿದ್ದರು. ಪತ್ನಿ ಅಗಲಿಕೆಯಿಂದ ಪತಿ ಕಾಡಪ್ಪ ಹಾಗೂ ಇಬ್ಬರು ಹೆಣ್ಣುಮಕ್ಕಳು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದೀಗ ಇಬ್ಬರು ಮಕ್ಕಳ ಜೊತೆ ಕಾಡಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ಭಾನುವಾರವೂ ಇಂಧನ ದರ ಹೆಚ್ಚಳ -ಜೂನ್ ಆರಂಭದಿಂದ 11 ನೇ ಸಲ ದರ ಏರಿಕೆ
ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.