ಬೆಂಗಳೂರು: ನೀರಾವರಿ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದ್ದು, ತನಿಖೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಟೆಂಡರ್ ಪಾರದರ್ಶಕವಾಗಿದೆ ಎಂದಿದ್ದಾರೆ.
ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ 5 ವರ್ಷ ಜೈಲು
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಿರಾವರಿ ಇಲಾಖೆ ಟೆಂಡರ್ ಹಿಂದಿನ ಸರ್ಕಾರಗಳಲ್ಲಿನ ಟೆಂಡರ್ ಪ್ರಕ್ರಿಯೆಯಂತೆಯೇ ನಡೆದಿದೆ. ಕೆಟಿಟಿಪಿ ಕಾಯ್ದೆ ಪ್ರಕಾರ ಟೆಂಡರ್ ನಡೆದಿದ್ದು ಎಲ್ಲವೂ ಪಾರದರ್ಶಕವಾಗಿವೆ. ಇಲಾಖೆ ಕಾರ್ಯದರ್ಶಿಯೇ ಸತ್ಯಾಸತ್ಯತೆ ತಿಳಿಸಿದ್ದಾರೆ. ಸತ್ಯಾಸತ್ಯತೆ ಗೊತ್ತಾದ ಮೇಲೆ ತನಿಖೆ ಅಗತ್ಯವಿಲ್ಲ. ಪ್ರತಿಪಕ್ಷಗಳು ಆರೋಪ ಮಾಡುವುದು ಸಹಜ ಎಂದು ಹೇಳಿದರು.
ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ಭಾನುವಾರವೂ ಇಂಧನ ದರ ಹೆಚ್ಚಳ -ಜೂನ್ ಆರಂಭದಿಂದ 11 ನೇ ಸಲ ದರ ಏರಿಕೆ
ಇನ್ನು ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಶಾಸಕರಿಂದಲೂ ಮಾಹಿತಿ ಕಲೆಹಾಕಲಾಗಿದೆ ಎಂದು ತಿಳಿಸಿದರು.