ಡಿಜಿಟಲ್ ಜಗತ್ತು ದೊಡ್ಡದಾಗುತ್ತಿರುವ ಹಿನ್ನೆಲೆಯಲ್ಲಿ ಕ್ಲೈಂಟ್‌ಗಳ ಬೇಡಿಕೆ ವಿಪರೀತವಾಗುತ್ತಿರುವ ಕಾರಣ, ಟೆಕ್ ದಿಗ್ಗಜ ಇನ್ಫೋಸಿಸ್ ಭಾರತದ 19,230 ಪದವೀಧರರಿಗೆ ಹಾಗೂ ವಿದೇಶದ 1,941 ಮಂದಿಯನ್ನು ಹೊಸದಾಗಿ ಕೆಲಸಕ್ಕೆ ತೆಗೆದುಕೊಂಡಿದೆ ಎಂದು ಸಂಸ್ಥೆಯ ಚೇರ್ಮನ್ ನಂದನ್ ನಿಲೇಕಣಿ ತಿಳಿಸಿದ್ದಾರೆ.
ಇದೇ ವೇಳೆ 2022ರ ವೇಳೆಗೆ ಅಮೆರಿಕದಲ್ಲಿ ತನ್ನ ಹೈರಿಂಗ್ ಗುರಿಯನ್ನು 25,000ಕ್ಕೆ ಏರಿಸಿದ್ದು, ಅನೇಕ ಪಾತ್ರಗಳಲ್ಲಿ ಸುಮಾರು 12,000 ಹೊಸ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದ್ದಾರೆ.
SSLC ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ಮಾಹಿತಿ: ಪ್ರಥಮ ಭಾಷೆಗೆ 125 ಅಂಕ
2020-21ರ ವಿತ್ತೀಯ ವರ್ಷದ ಆದಾಯ ಗಳಿಕೆಯಲ್ಲಿ 5% ವರ್ಧನೆ ಕಂಡ ಇನ್ಫೋಸಿಸ್ ಕಳೆದ ವರ್ಷ $13.6 ಶತಕೋಟಿಯಷ್ಟು ಆದಾಯ ಗಳಿಸಿದೆ ಎಂದು ಅವರು ತಿಳಿಸಿದ್ದಾರೆ.