alex Certify ಲಸಿಕೆ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲವೇ…? ಹಾಗಾದ್ರೆ ಕೋವಿನ್‌ ಅಪ್ಲಿಕೇಶನ್‌ ನಲ್ಲಿ ಈ ಮಾರ್ಗ ಅನುಸರಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಪ್ರಮಾಣ ಪತ್ರ ಪಡೆಯಲಾಗುತ್ತಿಲ್ಲವೇ…? ಹಾಗಾದ್ರೆ ಕೋವಿನ್‌ ಅಪ್ಲಿಕೇಶನ್‌ ನಲ್ಲಿ ಈ ಮಾರ್ಗ ಅನುಸರಿಸಿ

ಕೊರೊನಾ ಲಸಿಕೆಯ ಎರಡು ಡೋಸ್​ಗಳನ್ನ ಪಡೆದ ಬಳಿಕ ಪ್ರಮಾಣ ಪತ್ರ ಪಡೆಯುವಲ್ಲಿ ಸಂಕಷ್ಟ ಎದುರಿಸುತ್ತಿರೋರಿಗೆಂದೇ ಕೋವಿನ್​ ಅಪ್ಲಿಕೇಶನ್​ನಲ್ಲಿ ಹೊಸ ಸೌಲಭ್ಯವೊಂದನ್ನ ಪರಿಚಯಿಸಲಾಗಿದೆ.

ಕೊರೊನಾ ಮೊದಲ ಹಾಗೂ ಎರಡನೆ ಡೋಸ್​ ಪಡೆಯುವ ವೇಳೆ ಅನೇಕರು ಬೇರೆ ಬೇರೆ ಫೋನ್​ ನಂಬರ್​ ನೀಡಿದ ಕಾರಣ ಪ್ರಮಾಣ ಪತ್ರ ಸಿಗುತ್ತಿಲ್ಲ.

ಮಹಾರಾಷ್ಟ್ರ ಒಂದರಲ್ಲೇ ಈ ರೀತಿಯ 1 ಲಕ್ಷಕ್ಕೂ ಅಧಿಕ ಮಂದಿಗೆ ಈ ಸಮಸ್ಯೆ ಎದುರಾಗಿದೆ. ಬೇರೆ ಬೇರೆ ಫೋನ್​ ನಂಬರ್​ ನೀಡಿದ ಕಾರಣ ಎರಡೂ ಡೋಸ್​ಗಳನ್ನ ಪಡೆದ ಬಳಿಕವೂ ಲಸಿಕೆ ಪೂರ್ಣಗೊಂಡಿಲ್ಲ ಎಂದು ತೋರಿಸುತ್ತಿದೆ.

ಆದರೆ ಇನ್ಮುಂದೆ ಈ ರೀತಿ ಸಮಸ್ಯೆ ಕಾಣಸಿಗೋದಿಲ್ಲ. ಇದಕ್ಕಾಗಿ ನೀವು ಕೋವಿನ್​ ಅಪ್ಲಿಕೇಶನ್​ನಲ್ಲಿ raise an issue ಎಂಬ ಆಯ್ಕೆ ಮೇಡಿ ಕ್ಲಿಕ್​ ಮಾಡಿ ಬಳಿಕ merge multiple first dose provisional certificates ಆಯ್ಕೆಯನ್ನ ಒತ್ತಿರಿ .

ಕೋವಿನ್​ ಅಪ್ಲಿಕೇಶನ್ ಮೂಲಕ ಜನರು ಅತ್ಯಂತ ಸುಲಭವಾಗಿ ಲಸಿಕೆ ನೋಂದಣಿ ಪ್ರಕ್ರಿಯೆಯನ್ನ ಮಾಡಬಹುದಾಗಿದೆ. ಆದರೆ ಅನೇಕರಿಗೆ ವಿವಿಧ ಕಾರಣಗಳಿಂದ ಸೆಕೆಂಡ್​ ಡೋಸ್​ ಪಡೆದ ಬಳಿಕವೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಇನ್ಮುಂದೆ ಈ ಸಮಸ್ಯೆಗಳಿಗೆ ಅಪ್ಲಿಕೇಶನ್​ನಲ್ಲಿಯೇ ಪರಿಹಾರ ಸಿಗಲಿದೆ ಎಂದು ಆರ್​.ಎಸ್.​ ಶರ್ಮಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...