ಬೆಂಗಳೂರು: ರಾಜ್ಯ ಬಿಜೆಪಿ ನಾಯಕರ ಭಿನ್ನಮತ ಶಮನಕ್ಕೆ ಬಂದಿದ್ದ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಬಂದ ಪುಟ್ಟಾ..ಹೋದ ಪುಟ್ಟಾ ಎಂಬಂತಾಗಿದೆ. ಅವರು ಬಂದಿದ್ದು, ಜಗಳ ಬಿಡಿಸಲೋ ಅಥವಾ ಜಗಳ ಹಚ್ಚಿಸಲೋ ಎಂಬುದು ಗೊತ್ತಾಗುತ್ತಿಲ್ಲ ಬಡಪಾಯಿ ಪ್ರತಿನಿಧಿಯ ಕೆಲಸದಂತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಮಗನ ವಿರುದ್ಧದ ಆರೋಪ ಇದೇ ಮೊದಲಲ್ಲ. ಈ ಹಿಂದೆಯೂ ಕೇಳಿಬಂದಿದೆ. ಬಹಿರಂಗವಾಗಿ ಶಾಸಕರು ಆರೋಪ ಮಾಡುತ್ತಿದ್ದರೂ ಶಿಸ್ತಿನ ಕ್ರಮ ಕೈಗೊಳ್ಳದಿರುವುದು ನೋಡಿದರೆ ಬಿಜೆಪಿ ಹೈಕಮಾಂಡ್ ಆರೋಪ ಒಪ್ಪಿಕೊಂಡಿದೆ ಅಥವಾ ಭ್ರಷ್ಟಾಚಾರದಲ್ಲಿ ಅವರೂ ಕೂಡ ಭಾಗಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೊರೊನಾ 3ನೇ ಅಲೆ ಭೀತಿ; ಡಿಸೆಂಬರ್ ವರೆಗೂ ಚುನಾವಣೆಗಳಿಗೆ ಬ್ರೇಕ್
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ, ಪ್ರಧಾನಿ ಮೋದಿ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ಧವಷ್ಟೇ. ಉಳಿದಂತೆ ಚೀನಾ ದೊರೆಗಳಿರಲಿ, ಕರ್ನಾಟಕದ ಸ್ವಪಕ್ಷೀಯ ಬಂಡುಕೋರ ಮರಿಗಳಿರಲಿ..ಮೋದಿಯವರದ್ದು ಉತ್ತರಕುಮಾರನ ಪೌರುಷ ಎಂದು ಲೇವಡಿ ಮಾಡಿದ್ದಾರೆ.