alex Certify SHOCKING NEWS: 6-8 ವಾರಗಳಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ; ಏಮ್ಸ್ ಮುಖ್ಯಸ್ಥರ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: 6-8 ವಾರಗಳಲ್ಲಿ ದೇಶಕ್ಕೆ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ; ಏಮ್ಸ್ ಮುಖ್ಯಸ್ಥರ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಅಪ್ಪಳಿಸುವುದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಮುಂದಿನ 6-8 ವಾರಗಳಲ್ಲಿ ದೇಶದಲ್ಲಿ ಮೂರನೇ ಅಲೆ ಆರಂಭವಾಗಲಿದೆ ಎಂದು ಏಮ್ಸ್ ಮುಖ್ಯಸ್ಥ ರಣದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ.

ಈ ಕಾರಣಕ್ಕೆ ವೈರಲ್​ ಆಗಿದೆ ವೃದ್ಧ ಪತಿಯ ಘಜಲ್​​ ಗಾಯನ..!

ಅನ್ ಲಾಕ್ ಆರಂಭವಾಗುತ್ತಿದ್ದಂತೆಯೇ ಯಾರೂ ಮಾರ್ಗಸೂಚಿಯನ್ನು ಸರಿಯಾಗಿ ಪಾಲಿಸುತ್ತಿಲ್ಲ. ಜನರು ಕೊರೊನಾ ಮೊದಲ ಹಾಗೂ 2ನೇ ಅಲೆಯಿಂದ ಪಾಠ ಕಲಿತಂತೆ ಕಾಣುತ್ತಿಲ್ಲ. ಎಲ್ಲೆಡೆಯಲ್ಲಿಯೂ ಜನದಟ್ಟಣೆ ಕಂಡುಬರುತ್ತಿದೆ. ಮೂರನೇ ಅಲೆ ಆರಂಭವಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಯುದ್ಧಕಾಂಡ ಜನ ಸಾಮಾನ್ಯರ ಕರ್ಮಕಾಂಡ; ನರಕಯಾತನೆಗೆ ಕೊನೆಯಿಲ್ಲದಾಗಿದೆ; ಸರ್ಕಾರದ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ

ಕೊರೊನಾ ವೈರಸ್ ಈಗಲೂ ರೂಪಾಂತರವಾಗೊಳ್ಳುತ್ತಲೇ ಇದೆ. 3ನೇ ಅಲೆ ಬರಲು 3 ತಿಂಗಳು ಸಮಯ ತೆಗೆದುಕೊಳ್ಳಲಿದೆ. ಆದರೆ ವೇಗವಾಗಿ ಹರಡುವ ಸಾಧ್ಯತೆ ದಟ್ಟವಾಗಿದೆ. ಜನರಿಗೆ ಶೀಘ್ರವೇ ಲಸಿಕೆ ನೀಡದಿದ್ದಲ್ಲಿ ಇನ್ನಷ್ಟು ಜನರು ಕೋವಿಡ್ ಗೆ ತುತ್ತಾಗುವ ಸಾಧ್ಯತೆ ಇದೆ. ಎಲ್ಲರೂ ಎಚ್ಚರಿಕೆಯಿಂದ ಹೆಜ್ಜೆ ಇಡುವ ಅಗತ್ಯವಿದೆ. ಕೊರೊನಾ ಮೊದಲ ಅಲೆಯಲ್ಲಿ ವೇಗವಾಗಿ ಹರಡಲಿಲ್ಲ. ಆದರೆ 2ನೇ ಅಲೆಯಲ್ಲಿ ಅತಿ ವೇಗವಾಗಿ ವೈರಸ್ ಹರಡಿದೆ. ಹಾಗಾಗಿ ಮೂರನೇ ಅಲೆ ಆತಂಕವನ್ನು ಹೆಚ್ಚಿಸಿದ್ದು, ಅದರಲ್ಲೂ ಮಕ್ಕಳಲ್ಲಿ ಹೆಚ್ಚು ಮುಂಜಾಗೃತೆ ವಹಿಸುವುದು ಅಗತ್ಯ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...