ಕೋವಿಡ್ ಸಾಂಕ್ರಮಿಕದ ನಡುವೆಯೇ ಚೆರ‍್ರಿ ಬೆಳೆಗಾರರ ಮೊಗದಲ್ಲಿ ನಗು ಮೂಡಿಸುವಂತ ಫಸಲು ಬಂದಿದೆ. ಇದೇ ವೇಳೆ, ಲಾಕ್‌ಡೌನ್‌ನ ಯಾವುದೇ ಸಮಸ್ಯೆ ಇಲ್ಲದೇ ಈ ಹಣ್ಣುಗಳು ಉತ್ತರ ಭಾರತದ ವಿವಿಧ ನಗರಗಳನ್ನು ತಲುಪುತ್ತಿವೆ.
ಈ ವೆಬ್ ಸೈಟ್ ನಲ್ಲಿ ಹಳೆ ಬಟ್ಟೆ ಮಾರಾಟ ಮಾಡಿ ʼಹಣʼ ಗಳಿಸಿ
ತೋಟಗಾರಿಕಾ ಬೆಳೆಗಳದ್ದೇ ಪಾರುಪತ್ಯವಾದ ಹಿಮಾಚಲ ಪ್ರದೇಶದಲ್ಲಿ ಈ ವರ್ಷ 773 ಟನ್‌ಗಳಷ್ಟು ಚೆರ‍್ರಿ ಇಳುವರಿಯಾಗಿದ್ದು, ಅಂದಾಜಿಸಿದ್ದ 1000 ಟನ್‌ಗಳಿಗಿಂತ ಕಡಿಮೆಯಾಗಿದೆ. ಆದರೆ ಕಳೆದ ವರ್ಷದ 683 ಟನ್ ಇಳುವರಿಗಿಂತ ಈ ಬಾರಿ ಕೊಂಚ ಸುಧಾರಣೆ ಕಂಡುಬಂದಿದೆ.
ಸೋದರರು ಜಮೀನಿಗೆ ತೆರಳುವಾಗ ನಡೆದಿದೆ ಆಘಾತಕಾರಿ ಘಟನೆ
“ಈ ವರ್ಷ ನಾವು 1000 ಟನ್ ಚೆರ‍್ರಿ ಬೆಳೆಯುವ ನಿರೀಕ್ಷೆಯಲ್ಲಿದ್ದೆವು. ಆದರೆ ಚಳಿಗಾಲದ ವಿಸ್ತರಣೆ ಹಾಗೂ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತದ ಕಾರಣದಿಂದ ಹಲವಾರು ಕಡೆಗಳಲ್ಲಿ, ಅದರಲ್ಲೂ ಶಿಮ್ಲಾ ಬಳಿ, ಬೆಳೆ ಡ್ಯಾಮೇಜ್ ಆಗಿದೆ” ಎಂದಿದ್ದಾರೆ ಅಧಿಕಾರಿಗಳು