ನೀರು ತುಂಬಿದ ಬಕೆಟ್ ಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ತರಿಕಲ್ಲು ಗ್ರಾಮದಲ್ಲಿ ನಡೆದಿದೆ.
ಸುಂದರರಾಜ್ ಅವರ ಎರಡು ವರ್ಷದ ಮಗು ಮನೆಯೊಳಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಚ್ಚಲು ಮನೆ ಬಳಿ ಇಟ್ಟಿದ್ದ ಬಕೆಟ್ ಗೆ ಬಿದ್ದಿದೆ. ಬೇರೆ ಕೆಲಸದಲ್ಲಿ ಮಗ್ನರಾಗಿದ್ದ ಮನೆಯವರು ಇದನ್ನು ಗಮನಿಸಿರಲಿಲ್ಲ. ನಂತರ ಹುಡುಕಾಡಿದಾಗ ಮಗು ನೀರಿನ ಬಕೆಟ್ ನಲ್ಲಿ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.