ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಟಕ್ಕರ್ ನೀಡಿರುವುದು ಟ್ವಿಟರ್ ಗೆ ಭಾರಿ ಹೊಡೆತ ನೀಡಿದೆ. ಭಾರತ ಸರ್ಕಾರ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮ ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದ ಕಾರಣ, ಟ್ವಿಟರ್ ತನ್ನ ಷೇರುಗಳ ಮೇಲೆ ಹೊಡೆತ ಬಿದ್ದಿದೆ. ಟ್ವಿಟರ್ ಷೇರುಗಳು ತೀವ್ರವಾಗಿ ಇಳಿಕೆ ಕಂಡಿವೆ.
ಟ್ವಿಟ್ಟರ್ ವಿವಾದಗಳಿಂದಾಗಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿನ ಷೇರು 52 ವಾರಗಳ ಗರಿಷ್ಠ ಮಟ್ಟದಿಂದ ಶೇಕಡಾ 25 ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದೆ. ಜೂನ್ 16 ರಂದು ಎಲ್ಲ ಸಾಮಾಜಿಕ ಜಾಲತಾಣಗಳು ಹೊಸ ಐಟಿ ನಿಯಮಗಳನ್ನು ಜಾರಿಗೆ ತಂದಿವೆ. ಆದ್ರೆ ಟ್ವಿಟರ್ ಮಾತ್ರ ನಿಯಮ ಮುರಿದಿದೆ. ಟ್ವಿಟರ್ ಗೆ ಸಾಕಷ್ಟು ಅವಕಾಶ ನೀಡಲಾಗಿತ್ತು ಎಂದು ಭಾರತ ಸರ್ಕಾರ ಹೇಳಿದೆ. ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಟ್ವಿಟ್ಟರ್ ನ ಷೇರುಗಳು ಬುಧವಾರ ಅರ್ಧದಷ್ಟು ಕುಸಿದು 59.93 ಡಾಲರ್ ಗೆ ತಲುಪಿದೆ.
ಗುರುವಾರ ಕಂಪನಿಯ ಷೇರುಗಳಲ್ಲಿ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಭಾರತದಲ್ಲಿ ಟ್ವಿಟರ್ ನಿಷೇಧಿಸುವುದಿಲ್ಲವೆಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ ನಂತ್ರ ಈ ಬೆಳವಣಿಗೆ ಕಾಣಿಸಿಕೊಂಡಿದೆ.