ನವದೆಹಲಿ: ಮುಂದಿನ ತಿಂಗಳು ಮಕ್ಕಳ ಮೇಲೆ ಲಸಿಕೆಯ ಪ್ರಯೋಗ ಮಾಡಲಾಗುತ್ತದೆ. ನೋವಾವ್ಯಾಕ್ಸ್, ಕೊವ್ಯಾಕ್ಸಿನ್, ಜೈಕೋವ್ ಲಸಿಕೆ ಟ್ರಯಲ್ ನಡೆಸಲಾಗುವುದು. ಈಗಾಗಲೇ ಅಮೆರಿಕದಲ್ಲಿ ನೋವಾವ್ಯಾಕ್ಸ್ ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ.
ನೋವಾವ್ಯಾಕ್ಸ್ ಮಕ್ಕಳ ಮೇಲಿನ ಪ್ರಯೋಗದಲ್ಲಿ ಶೇಕಡ 91 ರಷ್ಟು ಪರಿಣಾಮಕಾರಿಯಾಗಿದೆ. ಭಾರತದಲ್ಲಿ ಈಗ ಮಕ್ಕಳ ಮೇಲೆ ಪ್ರಯೋಗಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೋರೋನಾ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಕ್ರಮಕೈಗೊಳ್ಳಲಾಗಿದೆ. ದೇಶದಲ್ಲಿ 10 -18 ವರ್ಷದ 20 ಕೋಟಿ ಮಕ್ಕಳಿದ್ದಾರೆ. ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡಿಕೆಯೊಂದೇ ಅಸ್ತ್ರವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.