ಚಿನ್ನದ ಹಾಲ್ಮಾರ್ಕಿಂಗ್ ಗೆ ಸಂಬಂಧಿಸಿದಂತೆ ಚಿನ್ನದ ವ್ಯಾಪಾರಿಗಳಿಗೆ ಸರ್ಕಾರ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಚಿನ್ನದ ಹಾಲ್ಮಾರ್ಕಿಂಗ್ ಅನುಸರಿಸದ ಚಿನ್ನದ ವ್ಯಾಪಾರಿಗಳಿಗೆ ಆಗಸ್ಟ್ ವರೆಗೆ ರಿಯಾಯಿತಿ ನೀಡಿದೆ. ಅಂದ್ರೆ ಆಗಸ್ಟ್ ವರೆಗೆ ಚಿನ್ನದ ಹಾಲ್ಮಾರ್ಕಿಂಗ್ ನಿಯಮ ಅನುಸರಿಸದ ಚಿನ್ನದ ವ್ಯಾಪಾರಿಗಳಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ.
ನಿಯಮಗಳ ಪ್ರಕಾರ ಗ್ರಾಹಕರ ದೂರುಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಗ್ರಾಹಕರು BISCARE APP ಅಥವಾ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಪೋರ್ಟಲ್ನಲ್ಲಿ ದೂರುಗಳನ್ನು ಸಲ್ಲಿಸಬಹುದು. ಜೂನ್ 16 ರಿಂದ ದೇಶದ 256 ಜಿಲ್ಲೆಗಳಲ್ಲಿ ಚಿನ್ನದ ಆಭರಣಗಳಿಗೆ ಗೋಲ್ಡ್ ಹಾಲ್ಮಾರ್ಕಿಂಗ್ ಕಡ್ಡಾಯವಾಗಿದೆ. 14, 18 ಮತ್ತು 22 ಕ್ಯಾರೆಟ್ ಚಿನ್ನಕ್ಕೆ ಇದು ಅನ್ವಯವಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಇದು ಜಾರಿಗೆ ಬರಲಿದೆ.
ಜನವರಿ 15, 2021ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ 2019 ರ ನವೆಂಬರ್ನಲ್ಲಿ ಘೋಷಿಸಿತ್ತು. ಆದರೆ ಗಡುವನ್ನು ಜೂನ್ 1 ಕ್ಕೆ ವಿಸ್ತರಿಸಲಾಯಿತು. ಅದನ್ನು ಮತ್ತೆ ಜೂನ್ 16 ಕ್ಕೆ ವಿಸ್ತರಿಸಲಾಯಿತು.