
ಕೇಂದ್ರ ಸರ್ಕಾರದ 52 ಲಕ್ಷ ಸಕ್ರಿಯ ಉದ್ಯೋಗಿಗಳು ಹಾಗೂ 61 ಲಕ್ಷ ಪಿಂಚಣಿದಾರರು ಜುಲೈ 1ರಿಂದ 7ನೇ ವೇತನಾ ಆಯೋಗದ ಶಿಫಾರಸಿನಂತೆ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಪಡೆಯಲಿದ್ದಾರೆ. ಇದೇ ವೇಳೆ ನೌಕರರು ತಮ್ಮ ಡಿಎ ಅರಿಯರ್ಗಳನ್ನೂ ಸಹ ಪಡೆಯಲಿದ್ದಾರೆ.
ಇದೇ ವೇಳೆ ನವೋದಯ ವಿದ್ಯಾಲಯ ಸಮಿತಿಯ ಶಾಲೆಗಳ ನೌಕರರಿಗೆ ನೀಡಲಾಗುತ್ತಿರುವ ವೈದ್ಯಕೀಯ ಭತ್ಯೆಯನ್ನು ಐದು ಪಟ್ಟು ಏರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಪೆಟ್ರೋಲ್ – ಡೀಸೆಲ್ ಗೆ ಪರ್ಯಾಯ ಇಂಧನವಾಗಿ ಎಥನಾಲ್: ಉತ್ಪಾದನೆ ಹೆಚ್ಚಳಕ್ಕೆ ಮುಂದಾದ ಭಾರತ
ಇದುವರೆಗೂ ವೈದ್ಯಕೀಯ ಭತ್ಯೆಯೆಂದು ಕೊಡಲಾಗುತ್ತಿದ್ದ 5000 ರೂ.ಗಳನ್ನು ಇನ್ನು ಮುಂದೆ 25,000 ರೂ.ಗಳಿಗೆ ಏರಿಸಲಾಗಿದೆ. ಈ ಭತ್ಯೆಯು ಸರ್ಕಾರಿ ಅಥವಾ ಕೇಂದ್ರ ಸರ್ಕಾರದ ಆರೋಗ್ಯ ಸ್ಕೀಂ (ಸಿಜಿಎಚ್ಎಸ್) ಮಾನ್ಯೀಕರಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಅನ್ವಯವಾಗುತ್ತದೆ.
ಗರ್ಭಿಣಿಯರಿಗೆ ಲಸಿಕೆ ಹಾಕುವ ಕುರಿತು ಐಸಿಎಂಆರ್ ಮಹತ್ವದ ಹೇಳಿಕೆ
ಇದೇ ನವೋದಯ ವಿದ್ಯಾಲಯ ಸಮಿತಿ ಸಿಬ್ಬಂದಿಗೆ ವೈದ್ಯಕೀಯ ಸಲಹೆಗೆ ವಿರುದ್ಧವಾದ ವೈದ್ಯಕೀಯ (ಎಎಂಎ) ವೆಚ್ಚವನ್ನು ಭರಿಸಲು ಇದುವರೆಗೂ ಇದ್ದ 5000 ರೂ.ಗಳ ಬದಲಿಗೆ ಇನ್ನು ಮುಂದೆ 15,000 ರೂ.ಗಳ ವೈದ್ಯಕೀಯ ಕ್ಲೈಂ ಪಡೆಯಬಹುದಾಗಿದೆ.
ಎಎಂಎಯನ್ನು ವೈದ್ಯರನ್ನು ಸಂಪರ್ಕಿಸದೇ ತಮ್ಮದೇ ವಿವೇಚನೆಯಿಂದ ಡಿಸ್ಚಾರ್ಜ್ ಆಗುವ ರೋಗಿಗಳಿಗೆ ಅನ್ವಯಿಸಬಹುದಾಗಿದೆ.