ಅಮೆರಿಕದಲ್ಲಿ ಕೊರೊನಾ ನಿರ್ಬಂಧಗಳು ಕಡಿಮೆಯಾದ ಬಳಿಕ ದಾಖಲೆಯ ಪ್ರಮಾಣದಲ್ಲಿ ಜನರು ಊಟಕ್ಕಾಗಿ ರೆಸ್ಟೋರೆಂಟ್ಗಳಿಗೆ ಭೇಟಿ ನೀಡ್ತಿದ್ದಾರೆ. ಈಗ ಕಾರ್ಮಿಕರ ಕೊರತೆ ಬೇರೆ ಇರೋದ್ರಿಂದ ರೆಸ್ಟೋರೆಂಟ್ಗಳು ಗ್ರಾಹಕರ ಬೇಡಿಕೆಗಳನ್ನ ಪೂರೈಸುವಲ್ಲಿ ಹೆಣಗಾಡುತ್ತಿವೆ.
ಯೆಲ್ಪ್ ದತ್ತಾಂಶ ನೀಡಿರುವ ಮಾಹಿತಿಯ ಪ್ರಕಾರ ಮೇ ತಿಂಗಳೊಂದರಲ್ಲೇ 3.7 ಮಿಲಿಯನ್ ಡಿನ್ನರ್ ಸೀಟ್ಗಳು ಇದರ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾಗಿದೆಯಂತೆ. ಇದು 2019ರ ಮೇ ತಿಂಗಳಿಗೆ ಹೋಲಿಕೆ ಮಾಡಿದರೆ 48 ಪ್ರತಿಶತಕ್ಕೂ ಅಧಿಕ ಆರ್ಡರ್ ಆಗಿದೆ ಎಂದು ರೆಸ್ಟೋರೆಂಟ್ ಮಾಲೀಕ ಹೇಳಿದ್ದಾರೆ.
ಕೊರೊನಾ ಲಸಿಕೆಗಳನ್ನ ಪಡೆದ ಬಳಿಕ ಅಮೆರಿಕದಲ್ಲಿ ಜನತೆಗೆ ಮಾಸ್ಕ್ ಸೇರಿದಂತೆ ಸಾಕಷ್ಟು ನಿರ್ಬಂಧಗಳಿಂದ ವಿನಾಯ್ತಿ ನೀಡಲಾಗ್ತಾ ಇದೆ. ಅಲ್ಲದೇ ಅಮೆರಿಕದಲ್ಲಿ ಹೊಸ ರೆಸ್ಟೋರೆಂಟ್ ಗಳು ಹಾಗೂ ಆಹಾರ ಸಂಬಂಧಿ ಉದ್ಯಮಗಳು ಒಂದೊಂದೇ ಶುರುವಾಗ್ತಾ ಇದೆ.
ಮೇ ತಿಂಗಳೊಂದರಲ್ಲೇ ದೇಶದಲ್ಲಿ 6000ಕ್ಕೂ ಅಧಿಕ ರೆಸ್ಟೋರೆಂಟ್ ಗಳು ಆರಂಭಗೊಂಡಿವೆ. ಏಪ್ರಿಲ್ ತಿಂಗಳಲ್ಲಿ 16500 ರೆಸ್ಟೋರೆಂಟ್ ಗಳು ತಲೆ ಎತ್ತಿದ್ದವು. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಆಹಾರ ಸಂಬಂಧಿ ಉದ್ಯಮ ಹೆಚ್ಚಾಗುತ್ತಿದೆ ಎಂದು ಈ ಅಧ್ಯಯನ ಹೇಳಿದೆ.