
ಮೆದುಳಿನ ಸೋಂಕಿನಿಂದ ಬಳಲುತ್ತಿದ್ದ ಕ್ಯಾಲಿಫೋರ್ನಿಯಾದ 26 ವರ್ಷದ ವ್ಯಕ್ತಿಯೊಬ್ಬ ಸಂಪೂರ್ಣ ನೆನಪಿನ ಶಕ್ತಿಯನ್ನ ಕಳೆದುಕೊಂಡ ಬಳಿಕ ಮತ್ತೊಮ್ಮೆ ಹೇಗೆ ನಡೆಯಬೇಕು ಹಾಗೂ ಮಾತನಾಡಬೇಕು ಅನ್ನೋದನ್ನ ಕಲಿತಿದ್ದಾನೆ.
ವೆಸ್ಲಿ ಪ್ರೊಸೆರ್ ಎಂಬಾತ ಎನ್ಸೆಫಾಲೆಟಿಸ್ ಎಂಬ ಸೋಂಕಿನಿಂದ ಬಳಲುತ್ತಿದ್ದ. ಇದರಿಂದ ಮೆದುಳು ಊದಿಕೊಳ್ಳಲು ಆರಂಭಿಸಿತು. ಈತನ ಸ್ಥಿತಿ ಕ್ರಮೇಣವಾಗಿ ಗಂಭೀರವಾಗುತ್ತಾ ಹೋಯಿತು. ಈ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬಿಗಡಾಯಿಸಿತು ಅಂದರೆ ಆತನಿಗೆ ನಡೆದಾಡಲು, ಮಾತನಾಡೋದೇ ಮರೆತು ಹೋಯ್ತು.
ಬರೋಬ್ಬರಿ ಆರು ತಿಂಗಳ ಚಿಕಿತ್ಸೆಯ ಬಳಿಕ ವೆಸ್ಲಿ ಮರುಜನ್ಮವನ್ನ ಪಡೆದಿದ್ದ. ಇದೆಲ್ಲವೂ 2017ರಿಂದ ಆರಂಭವಾಗಿತ್ತು. ಮೊದಮೊದಲು ವೆಸ್ಲಿ ತನಗೆ ಶೀತ ಆಗಿದೆ ಎಂದೇ ಭಾವಿಸಿದ್ದರು. ಆದರೆ ಕ್ರಮೇಣವಾಗಿ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ವೆಸ್ಲಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಇದಾದ ಬಳಿಕ ಮೆದುಳಿನ ಸೋಂಕಿನ ಬಗ್ಗೆ ವೆಸ್ಲಿಗೆ ಮಾಹಿತಿ ತಿಳಿಯಿತು.
ಆರು ತಿಂಗಳ ಬಳಿಕ ವೆಸ್ಲಿ ಮರುಜನ್ಮ ಪಡೆದಿದ್ದರು, ಆದರೆ ಅವರಿಗೆ ನಡೆದಾಡಲು ಮಾತನಾಡಲು ತಿಳಿಯುತ್ತಿರಲಿಲ್ಲ. ತನಗೆ ಮಾತನಾಡಲು ಹಾಗೂ ನಡೆದಾಡಲು ಸಾಧ್ಯವೇ ಇಲ್ಲವೇನೋ ಎಂದು ವೆಸ್ಲಿ ಭಾವಿಸಿದ್ದರು. ಅಲ್ಲದೇ ವೆಸ್ಲಿಗೆ ತನ್ನ ಕುಟುಂಬಸ್ಥರ ಹಾಗೂ ಸ್ನೇಹಿತರ ಪರಿಚಯವೂ ಇರಲಿಲ್ಲ. ಆದರೆ ಇದೀಗ ನಾಲ್ಕು ವರ್ಷಗಳ ಸತತ ಪರಿಶ್ರಮದ ಬಳಿಕ ವೆಸ್ಲಿ ಮತ್ತೆ ಮಾತನಾಡಲು ಹಾಗೂ ನಡೆದಾಡಲು ಕಲಿತಿದ್ದಾರೆ.