ಸೂರ್ಯೋದಯದ ನಂತ್ರ ದಿನ ಆರಂಭವಾದ್ರೆ ಸೂರ್ಯಾಸ್ತದ ನಂತ್ರ ಸಂಜೆ ಆರಂಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥದ ಪ್ರಕಾರ, ಸೂರ್ಯಾಸ್ತದ ನಂತ್ರ ಕೆಲವೊಂದು ಕೆಲಸಗಳನ್ನು ಮಾಡಬಾರದು.
ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವಿರುತ್ತದೆ. ಇದನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ. ಮನೆಯಲ್ಲಿ ತುಳಸಿಯಿರುವುದು ಶುಭಕರ. ಧರ್ಮಗ್ರಂಥದ ಪ್ರಕಾರ ಸೂರ್ಯಾಸ್ತದ ನಂತ್ರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ಮುಟ್ಟಬಾರದು. ಅದಕ್ಕೆ ನೀರನ್ನು ಹಾಕಬಾರದು. ಇದ್ರಿಂದ ತಾಯಿ ಲಕ್ಷ್ಮಿ ಕೋಪಗೊಳ್ತಾಳೆ.
ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಆದರೆ ಸೂರ್ಯಾಸ್ತದ ನಂತರ ಮೊಸರನ್ನು ಎಂದಿಗೂ ದಾನ ಮಾಡಬಾರದು. ಮೊಸರು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ. ಇದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಸಂಜೆ ಮೊಸರು ದಾನ ಮಾಡುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಮಸ್ಯೆ ಎದುರಾಗುತ್ತದೆ.
ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ಆಹಾರವನ್ನು ಸೇವಿಸಬಾರದು. ಇದರಿಂದ ಆರ್ಥಿಕ ನಷ್ಟವಾಗುತ್ತದೆ. ಇದರ ಜೊತೆಗೆ ಆರೋಗ್ಯ ಸಮಸ್ಯೆ ಕಾಡುತ್ತದೆ.
ಸೂರ್ಯಾಸ್ತದ ಸಮಯದಲ್ಲಿ ಮನೆಯನ್ನು ಗುಡಿಸಿ, ಸ್ವಚ್ಛಗೊಳಿಸಬಾರದು. ಸೂರ್ಯಾಸ್ತದ ನಂತರ ಮನೆಯನ್ನು ಗುಡಿಸಿದ್ರೆ ಮನೆಯಲ್ಲಿ ಸಂತೋಷ ಮಾಯವಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಆಟವಾಡಬಹುದು. ವ್ಯಾಯಾಮ ಮಾಡಬಹುದು.
ಸೂರ್ಯಾಸ್ತದ ನಂತರ ಕೂದಲು ಕತ್ತರಿಸಬೇಡಿ. ಸೂರ್ಯಾಸ್ತದ ನಂತರ ಅನೇಕ ಜನರು ತಮ್ಮ ಕೂದಲನ್ನು ಕತ್ತರಿಸುತ್ತಾರೆ ಅಥವಾ ಕ್ಷೌರ ಮಾಡುತ್ತಾರೆ. ಇದನ್ನು ಮಾಡುವುದರಿಂದ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಣದ ಸಮಸ್ಯೆ ಎದುರಾಗುತ್ತದೆ.