ಕೋವಿಡ್ ಸಾಂಕ್ರಮಿಕದ ಕಾರಣ ಜನರಿಗೆ ಪರಸ್ಪರ ಸಂಪರ್ಕ ಕಷ್ಟವಾಗಿದ್ದು, ಪ್ರೀತಿಯ ಅಪ್ಪುಗೆಯಂಥ ಚಿಕ್ಕಪುಟ್ಟ ವಿಷಯಗಳಿಗೂ ಎಡತಾಕುತ್ತಿದ್ದಾರೆ. ಈ ಅಪ್ಪುಗೆಯು ಒಂದೊಳ್ಳೆ ಥೆರಪಿಯಾಗಬಲ್ಲ ಕಾರಣ ’ಅಪ್ಪುಗೆಯ ಥೆರಪಿ’ ಅಮೆರಿಕದೆಲ್ಲೆಡೆ ಜನಪ್ರಿಯತೆ ಪಡೆಯುತ್ತಿದೆ.
ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಉಪ್ಪು
ಇಂಥ ಸಂದರ್ಭದಲ್ಲಿ, ವೃತ್ತಿಪರ ಅಪ್ಪುಗೆಗಾತಿ ಕೇಲಿ ಶೌಪ್ ಎಂಬ ಯುವತಿ ಜನರ ನೆರವಿಗೆ ಧಾವಿಸಿದ್ದಾರೆ. ಷಿಕಾಗೋದಲ್ಲಿ ನೆಲೆಸಿರುವ ಈಕೆ ತನ್ನ ವಹಿವಾಟಿನ ಬಗ್ಗೆ ಮಾತನಾಡಿದ್ದು, “ನನ್ನ ವರ್ತನೆಯ ಮಿತಿಯೊಳಗೆ ಕೇಳಲ್ಪಡುವ ಏನನ್ನಾದರೂ ಪೂರ್ಣಹೃದಯದಿಂದ ಮಾಡಲು ನಾನು ಸಿದ್ಧ” ಎನ್ನುವ ಶೌಪ್, ಮಕ್ಕಳಿಗೆ ಕಥೆ ಓದಿ ಹೇಳುವುದರಿಂದ ಹಿಡಿದು ಪ್ರೀತಿಯ ಕಚ್ಛಾಟಗಳವರೆಗೂ ಈ ಸಂಕಷ್ಟದ ಕಾಲಘಟ್ಟದಲ್ಲಿ ತಮ್ಮನ್ನು ಕೇರ್ ಮಾಡಲು ಒಬ್ಬರಿದ್ದಾರೆ ಎನ್ನುವ ಫೀಲ್ ಬರುವ ಹಾಗೆ ಜನರಿಗೆ ಮಾಡಲು ಹೊರಟಿದ್ದಾರೆ.
ಕೊರೋನಾ ಲಸಿಕೆ ಎರಡನೇ ಡೋಸ್ ಅವಧಿ ಕಡಿತ, ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯ
ತಮ್ಮ ಈ ವಿನೂತನ ಸೇವೆಗೆ $100/ಗಂಟೆಯಂತೆ ಚಾರ್ಜ್ ಮಾಡುವ ಶೌಪ್, ಹಲವು ಬಾರಿ ಅಪ್ಪುಗೆಯ ಥೆರಪಿ ಕೊಡುವ ವೇಳೆ ತನ್ನನ್ನು ಯಾರೂ ಸಹ ಲೈಂಗಿಕಾಸಕ್ತಿಯಿಂದ ನೋಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.