ಕೋವಿಡ್-19 ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ತಮ್ಮ ಹೃದಯ ವೈಶಾಲ್ಯತೆ ಮೆರೆಯುವ ಮೂಲಕ ತುರ್ತು ಅಗತ್ಯವಿರುವ ಅನೇಕ ಜನರ ನೆರವಿಗೆ ನಿಂತಿದ್ದಾರೆ.
ಸಾಂಕ್ರಮಿಕದ ಎರಡನೇ ಅಲೆಯ ನಡುವೆ, ಪಶ್ಚಿಮ ಬಂಗಾಳದ ಮೊದಲ ಮಹಿಳಾ ಇ-ರಿಕ್ಷಾ ಚಾಲಕಿ ಮುನ್‌ಮುನ್ ಸರ್ಕಾರ್ ತಮ್ಮ ರಿಕ್ಷಾವನ್ನೇ ಆಂಬುಲೆನ್ಸ್ ಆಗಿ ಮಾರ್ಪಾಡು ಮಾಡುವ ಮೂಲಕ ಅನೇಕ ಜೀವಗಳನ್ನು ಉಳಿಸುತ್ತಾ ಬಂದಿದ್ದಾರೆ. 24 ಗಂಟೆಗಳ ಕಾಲ ಸೇವೆ ಒದಗಿಸುವ ಸರ್ಕಾರ್, ಅದಕ್ಕಾಗಿ ನಯಾಪೈಸೆ ತೆಗೆದುಕೊಳ್ಳುತ್ತಿಲ್ಲ.
18 ವರ್ಷ ಮೇಲ್ಪಟ್ಟ ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
“ಕಳೆದ ವರ್ಷ ಕೋವಿಡ್-19 ಸಾಂಕ್ರಮಿಕದ ಸಂದರ್ಭದಲ್ಲಿ ಆಂಬುಲೆನ್ಸ್ ಚಾಲಕರು ಸೋಂಕಿತರ ಕುಟುಂಬಗಳಿಂದ ಸಿಕ್ಕಾಪಟ್ಟೆ ಹಣ ಪೀಕಿಸುತ್ತಿದ್ದರು. ಆ ಸಂದರ್ಭದಲ್ಲಿ ನಾನು ನನ್ನ ಇ-ರಿಕ್ಷಾವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಲು ನಿರ್ಧರಿಸಿ ಕೋವಿಡ್ ಸೋಂಕಿತರನ್ನು ಉಚಿತವಾಗಿ ಆಸ್ಪತ್ರೆಗೆ ಸಾಗಿಸಲು ನಿರ್ಧರಿಸಿದೆ. ನಾನು ಸತ್ತ ಮೇಲೂ ಜನ ನನ್ನನ್ನು ನೆನಪಿಸಿಕೊಳ್ಳುವಂಥ ಕೆಲಸ ಮಾಡಬೇಕು” ಎಂದು ಸರ್ಕಾರ್ ಹೇಳುತ್ತಾರೆ.
ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ರಹಸ್ಯ
ಕೋವಿಡ್ ಸೋಂಕಿತರಿಗೆ ಮಾತ್ರವಲ್ಲದೇ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಬಯಸುವ ಮಂದಿಗೂ ಸರ್ಕಾರ್ ಉಚಿತ ರೈಡ್ ಕೊಡುತ್ತಿದ್ದಾರೆ.