ಸಾಮಾನ್ಯವಾಗಿ ಕಲಾಕೃತಿಗಳು ಹಾಗೂ ಆಭರಣಗಳು ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಬಿಕರಿಯಾಗುತ್ತವೆ. ಆದರೆ ನ್ಯೂಜಿಲೆಂಡ್‌ನಲ್ಲಿ, ರಾಫಿಡೋಫೊರಾ ಟೆಟ್ರಾಸ್ಪರ್ಮಾ ಸಸಿಯೊಂದು $19,279ಗೆ (14 ಲಕ್ಷ ರೂ.) ಹರಾಜಾಗುವ ಮೂಲಕ ಭಾರೀ ಅಚ್ಚರಿ ಮೂಡಿಸಿದೆ.
ಟ್ರೇಡ್ ಮೀ ಎಂಬ ನ್ಯೂಜಿಲೆಂಡ್ ಮೂಲದ ಹರಾಜು ಪೋರ್ಟಲ್ ಒಂದರ ಮುಖಾಂತರ ಈ ಒಳಾಂಗಣ ಸಸಿಯನ್ನು ಮಾರಾಟ ಮಾಡಲಾಗುತ್ತಿತ್ತು. ಈ ಸಸಿಗೆ ಎಂಟು ಎಲೆಗಳಿದ್ದು, ಒಂಬತ್ತನೇ ಎಲೆ ಇನ್ನೇನು ಅರಳಲಿದೆ ಎಂದು ಸಸಿಯ ವಿವರಣೆಯನ್ನು ಸಿದ್ಧಪಡಿಸಲಾಗಿತ್ತು.
ಕನಸಿನಲ್ಲಿ ‘ತಂದೆ – ತಾಯಿ’ ಕಾಣೋದೇಕೆ ಗೊತ್ತಾ….?
ಗಿಡದ ಕಾಂಡವು 14 ಸೆಂಮೀ ಮಡಿಕೆಯಲ್ಲಿ ಚೆನ್ನಾಗಿ ಬೇರು ಬಿಟ್ಟಿದೆ ಎಂದು ಹೆಚ್ಚುವರಿ ಮಾಹಿತಿಯನ್ನಾಗಿ ಹರಾಜಿನ ವೇಳೆ ಕೊಡಲಾಗಿತ್ತು. ರಾಫಿಡೋಫರಾ ಟೆಟ್ರಾಸ್ಪರ್ಮಾ ಸಸಿಗಳು ಮಲೇಷ್ಯಾ ಹಾಗೂ ಥಾಯ್ಲೆಂಡ್‌ಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತವೆ.