ವಿದೇಶಕ್ಕೆ ತೆರಳುವವರಿಗೆ ಕೋವಿಡ್ ಲಸಿಕೆಯ ಅವಧಿಯನ್ನು ಕಡಿತಗೊಳಿಸಲಾಗಿದೆ. ಮೊದಲ ಡೋಸ್ ಪಡೆದುಕೊಂಡ 24 ದಿನಗಳ ಒಳಗೆ ಎರಡನೇ ಲಸಿಕೆ ಪಡೆದುಕೊಳ್ಳಬಹುದು.
ವಿದೇಶಕ್ಕೆ ತೆರಳುವವರಿಗೆ ಮಾತ್ರ ಅನ್ವಯವಾಗಲಿದೆ. ಕೋವಿಶೀಲಡ್ ಲಸಿಕೆ ಪಡೆದವರಿಗೆ ಅನ್ವಯವಾಗಲಿದ್ದು, ಶಿಕ್ಷಣ, ಕ್ರೀಡೆ, ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರು ಜಿಲ್ಲೆಯ ಯಾವುದಾದರೂ ಆಯ್ದ ಕೇಂದ್ರದಲ್ಲಿ ಲಸಿಕೆ ಪಡೆಯಬಹುದು.
ಜಿಲ್ಲಾಧಿಕಾರಿ ಫಲಾನುಭವಿಗಳ ಆಯ್ಕೆ ಮಾಡಬೇಕು. ಕೋರ್ಟ್ ನಲ್ಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ದಾಖಲಾತಿ ಪರಿಶೀಲನೆ ಮಾಡಿ ಲಸಿಕೆಗೆ ಅನುಮತಿ ನೀಡಲಾಗುತ್ತದೆ. ವಿದೇಶಕ್ಕೆ ತೆರಳುವವರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.