ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆಯಾಯ್ತು ಸೂಯೆಜ್ ಕಾಲುವೆಯ ಅತ್ಯದ್ಭುತ ಫೋಟೋ 16-06-2021 7:39AM IST / No Comments / Posted In: Latest News, Live News, International ಫ್ರೆಂಚ್ ಗಗನಯಾತ್ರಿಯೊಬ್ಬರು ಫ್ರೆಂಚ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೂಯೆಜ್ ಕಾಲುವೆಯ ಫೋಟೋ ಕ್ಲಿಕ್ಕಿಸಿದ್ದು ಇದನ್ನ ಜೂನ್ 13ರಂದು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಇದು ಸಾಮಾನ್ಯ ಫೋಟೋವಲ್ಲ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ತೆಗೆಯಲಾದ 100ಕ್ಕೂ ಹೆಚ್ಚು ಫೋಟೋಗಳನ್ನ ಸೇರಿಸಿ ತೆಗೆಯಲಾದ ಚಿತ್ರವಾಗಿದೆ. ಸೂಯೆಜ್ ಕಾಲುವೆಯ ನೂರು ಜೂಮ್ ಇನ್ ಫೋಟೋಗಳನ್ನ ಸೇರಿಸಿ ಈ ಚಿತ್ರವನ್ನ ಹೊರತರಲಾಗಿದೆ ಎಂದು ಥೋಮಸ್ ಪೆಸ್ಕ್ವೆಟ್ ಹೇಳಿದ್ದಾರೆ. ಮಾನವನ ತಂತ್ರಜ್ಞಾನದ ಸಹಾಯದಿಂದ ನಾವು ಬಾಹ್ಯಾಕಾಶದಿಂದ ದೃಶ್ಯಗಳನ್ನ ಬರಿಗಣ್ಣಿನಿಂದಲೇ ನೋಡಬಹುದಾಗಿದೆ ಎಂದು ಬರೆದುಕೊಂಡಿದ್ದಾರೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಬ್ಲಾಗ್ಪೋಸ್ಟ್ ಮೇ 29ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಲಭ್ಯವಿರುವ ಅತೀ ಉದ್ದದ ಲೆನ್ಸ್ ಬಳಕೆ ಮಾಡಿ ಈ ಫೋಟೋಗಳನ್ನ ಕ್ಲಿಕ್ಕಿಸಲಾಗಿದೆ ಎಂದು ಹೇಳಿದೆ. LA construction humaine que l'on peut vraiment voir depuis l'espace à l’œil nu : le canal de #Suez reconstitué à partir de 100 clichés. 🇪🇬 🚢🚢🚢🚢🚢🚢🚢🚢https://t.co/1AvYZ3xxxD #MissionAlpha pic.twitter.com/oLE2OPF1Ln — Thomas Pesquet (@Thom_astro) June 12, 2021