ಸರ್ಕಾರಿ ಹುದ್ದೆಯನ್ನ ಹೊಂದಬೇಕು ಅನ್ನೋ ಕನಸು ಯಾರಿಗೆ ಇರೋದಿಲ್ಲ ಹೇಳಿ..? ನೀವು ಕೂಡ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಎಂದುಕೊಂಡಿದ್ದಲ್ಲಿ ಇದು ಸೂಕ್ತವಾದ ಸಮಯವಾಗಿದೆ.
ಪ್ರಸ್ತುತ ಬ್ಯಾಂಕಿಂಗ್, ಭಾರತೀಯ ಸೇನೆ, ಪೊಲೀಸ್ ಹುದ್ದೆ ಸೇರಿದಂತೆ ಸಾಕಷ್ಟು ಸರ್ಕಾರಿ ಕೆಲಸಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ ನೋಡಿ :
ಬಿಐಎಸ್ನಲ್ಲಿ ವಿಜ್ಞಾನಿಗಳ ಹುದ್ದೆ :
ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ , ನ್ಯಾಷನಲ್ ಸ್ಟಾಂಡರ್ಡ್ಸ್ ಬಾಡಿ ಆಫ್ ಇಂಡಿಯಾ ಇಂಜಿನಿಯರಿಂಗ್ ಪದವೀಧರರಿಗೆ ಸೈಂಟಿಸ್ಟ್ ಬಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಖಾಲಿ ಇರುವ 28 ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 25ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಬಿಐಎಸ್ ಸೈಂಟಿಸ್ಟ್ ಬಿ ಹುದ್ದೆಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಬೇಕು.
ಹೆಚ್ಎಸ್ಎಸ್ಸಿಯಲ್ಲಿ ಕಾನ್ಸ್ಟೇಬಲ್ ಹುದ್ದೆ :
ಹರಿಯಾಣದಲ್ಲಿ ಪೊಲೀಸ್ ಇಲಾಖೆಯ ಕಮಾಂಡೋ ವಿಭಾಗದಲ್ಲಿ ( ಗ್ರೂಪ್ ಸಿ) ಪುರುಷ ಅಭ್ಯರ್ಥಿಗಳಿಗಾಗಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 520 ಹುದ್ದೆಗಳು ಖಾಲಿ ಇದ್ದು ಜೂನ್ 14ರ ಒಳಗಾಗಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 12ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಯುಪಿಎಸ್ಸಿ ಎನ್ಡಿಎ II :
ಕೇಂದ್ರ ಸಾರ್ವಜನಿಕ ಸೇವಾ ಆಯೋಗವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೇವಲ್ ಅಕಾಡಮಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಜೂನ್ 29ರವರೆಗೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸೆಪ್ಟೆಂಬರ್ 5ನೇ ತಾರೀಖಿನಂದು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ.
ಐಬಿಪಿಎಸ್ ಆರ್ಆರ್ಬಿ ಪಿಒ, ಗುಮಾಸ್ತ ಹುದ್ದೆ
ಐಬಿಪಿಎಸ್ I, II ಮತ್ತು II ಸ್ಕೇಲ್ನ ಹುದ್ದೆಗಳು : ಹಾಗೂ ಗ್ರಾಮೀಣ ಬ್ಯಾಂಕುಗಳಲ್ಲಿ ಸಹಾಯಕ ಹುದ್ದೆ ಅರ್ಜಿ ಆಹ್ವಾನಿಸಿದೆ. ಜೂನ್ 8ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಜೂನ್ 28ರವರೆಗೂ ಆಸಕ್ತರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಪೂರ್ವ ತರಬೇತಿ ಪರೀಕ್ಷೆಯು ಜುಲೈ 19ರಿಂದ 25ರವರೆಗೆ ನಡೆಯಲಿದೆ.
ಡಿಆರ್ಡಿಓ ಅಪ್ರೆಂಟಿಸ್ ನೇಮಕಾತಿ :
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೋಧಪುರ ಕಚೇರಿಯಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
47 ಹುದ್ದೆಗಳಿಗೆ ಭರ್ತಿ ಕಾರ್ಯ ನಡೆಯಲಿದ್ದು ಆಸಕ್ತರಿಗೆ ಜೂನ್ 20ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಬಿಸಿಇಸಿಇಬಿ ನೇಮಕಾತಿ :
ಬಿಹಾರ ಸ್ಪರ್ಧಾತ್ಮಕ ಪರೀಕ್ಷಾ ಮಂಡಳಿಯು ರಾಜ್ಯದ ವಿವಿಧ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಉಪನ್ಯಾಸಕರಿಗೆ ಅರ್ಜಿ ಆಹ್ವಾನಿಸಿದೆ.
ಈ ನೇಮಕಾತಿ ಪ್ರಕ್ರಿಯೆಯು ಒಟ್ಟು 1797 ಹುದ್ದೆಗಳಿಗೆ ನಡೆಯಲಿದೆ. ಆನ್ಲೈನ್ ಅರ್ಜಿಯನ್ನ ಜೂನ್ 20ರ ಒಳಗೆ ಸಲ್ಲಿಕೆ ಮಾಡಬೇಕಿದೆ.
UPSSSC PET ನೇಮಕಾತಿ
ಉತ್ತರ ಪ್ರದೇಶ ಅಧೀನ ಸೇವಾ ಆಯ್ಕೆ ಆಯೋಗವು ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಇದ್ದಕ್ಕಾಗಿ ಪ್ರಾಥಮಿಕ ಅರ್ಹತಾ ಪರೀಕ್ಷೆಗೆ ಆನ್ಲೈನ್ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಜೂನ್ 21 ರೊಳಗಾಗಿ ಅರ್ಜಿ ಸಲ್ಲಿಸಬೇಕಿದೆ.
ಭಾರತೀಯ ಸೇನೆಯ ಎಸ್ಎಸ್ಸಿ-ಟೆಕ್ ನೇಮಕಾತಿ
ಭಾರತೀಯ ಸೇನೆಯಲ್ಲಿ ಎಸ್ಎಸ್ಸಿಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಇಂಜಿನಿಯರಿಂಗ್ ಪದವೀಧರರಿಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಅಭ್ಯರ್ಥಿಗಳು ಜೂನ್ 23ರ ಒಳಗಾಗಿ ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಪುರುಷರಿಗಾಗಿ 175 ಹುದ್ದೆ ಹಾಗೂ ಮಹಿಳೆಯರಿಗೆ 14 ಹುದ್ದೆಗಳು ಖಾಲಿ ಇವೆ.
ರೈಲ್ವೆ ಇಲಾಖೆಯಲ್ಲಿ ನೇಮಕಾತಿ :
ರೈಲ್ವೆ ರಿಕ್ರೂಟ್ಮೆಂಟ್ ಸೆಲ್, ವೆಸ್ಟರ್ನ್ ರೈಲ್ವೆಯು 3591 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿ ಜೂನ್ 24ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ನೇರ ನೇಮಕಾತಿ ಮೂಲಕ ಹುದ್ದೆಗಳ ಭರ್ತಿಕಾರ್ಯ ನಡೆಯೋದ್ರಿಂದ ಯಾವುದೇ ಪರೀಕ್ಷೆಗಳು ಇರೋದಿಲ್ಲ.
ಹೆಚ್ಪಿಎಸ್ಸಿ ಸಹಾಯಕ ಇಂಜಿನಿಯರ್ ಹುದ್ದೆ
ಹಿಮಾಚಲ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಗುತ್ತಿಗೆ ಆಧಾರದಲ್ಲಿ ಇ -2 ಮಟ್ಟದ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳಿಗೆ ಜೂನ್ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
UPRVUNL JE ನೇಮಕಾತಿ
ಉತ್ತರ ಪ್ರದೇಶ ರಾಜ್ಯ ವಿದ್ಯುತ್ ಉತ್ಪಾದನಾ ನಿಗಮ ಲಿಮಿಟೆಡ್ ಕಿರಿಯ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 2ರ ಒಳಗಾಗಿ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು. ಒಟ್ಟು 196 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.