ರಷ್ಯಾದ ಆರ್ಕ್ಟಿಕ್ ಪ್ರದೇಶದಲ್ಲಿರುವ ಅಲಾಯ್ಝಾ ನದಿಯಲ್ಲಿ 24,000 ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ’ಡೆಲ್ಲಾಯ್ಡ್ ರಾಟಿಫರ್’ ಎಂಬ ಬಹುಕೋಶ ಜೀವಿಯೊಂದು ಇದೀಗ ಮತ್ತೆ ಚಟುವಟಿಕೆಗೆ ಬಂದಿದೆ.
ʼಆನ್ ಲೈನ್ʼ ವಂಚನೆಯಿಂದ ಪಾರಾಗಲು SBI ನಿಂದ ಬಹುಮುಖ್ಯ ಮಾಹಿತಿ
ನದಿಯಿಂದ ಈ ಜೀವಿಯನ್ನು ತೆಗೆದುಕೊಂಡಿರುವ ವಿಜ್ಞಾನಿಗಳು ಸಂಶೋಧನೆಗೆಂದು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.
ಗರ್ಭಿಣಿಯರನ್ನು ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮದ್ದು
ರೇಡಿಯೋ ಕಾರ್ಬನ್ ಡೇಟಿಂಗ್ ಪರೀಕ್ಷೆಯಿಂದ ಈ ಸೂಕ್ಷ್ಮ ಜೀವಿಯ ವಯಸ್ಸು 23,960-24,485 ವರ್ಷಗಳು ಎಂದು ತಿಳಿದುಬಂದಿದೆ.
ಸಿಹಿನೀರಿನ ವಾತಾವರಣದಲ್ಲಿ ಬದುಕುವ ಜೀವಿಗಳ ಸಮೂಹದ ಭಾಗವಾಗಿರುವ ಈ ಸೂಕ್ಷ್ಮ ಜೀವಿಯು ವಿಪರೀತ ವಾತಾವರಣವನ್ನು ಸಹಿಸಿ ನಿಲ್ಲಬಲ್ಲದಾಗಿದ್ದು, ರೇಡಿಯೋ ವಿಕಿರಣ, ಆಮ್ಲಜನಕದ ಕೊರತೆ, ಹಸಿವು ಸೇರಿದಂತೆ ಅನೇಕ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲಬಲ್ಲದಾಗಿದೆ. ಹೀಗಾಗಿ ಈ ಸೂಕ್ಷ್ಮ ಜೀವಿಯು ಇಲ್ಲಿನ ಶೀತಮಯ ವಾತಾವರಣದಲ್ಲೂ ಬದುಕುಳಿದಿರುವುದು ದೊಡ್ಡ ಅಚ್ಚರಿಯೇನಲ್ಲ.