ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರು ಕೂಡ ರಜೆ, ತುಟ್ಟಿಭತ್ಯೆ ಪಡೆಯಲು ಅರ್ಹರು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ದಿನಗೂಲಿ ನೌಕರರು ಕೂಡ ರಾಜ್ಯ ಸರ್ಕಾರಿ ನೌಕರರಂತೆ ಶೇಕಡ 100 ರಷ್ಟು ತುಟ್ಟಿಭತ್ಯೆ ಮತ್ತು ವರ್ಷಕ್ಕೆ 30 ದಿನ ವೇತನ ಸಹಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದಿನಗೂಲಿ ನೌಕರರ ಶೇಕಡ 100 ರಷ್ಟು ತುಟ್ಟಿಭತ್ಯೆ ಮತ್ತು ಗಳಿಕೆ ರಜೆಯನ್ನು ಸರ್ಕಾರ ಕಡಿತಗೊಳಿಸಿ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ರಾಜ್ಯದ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿಧೇಯಕದಡಿ ನೇಮಕವಾದ ನೌಕರರ ಒಕ್ಕೂಟ ಮನವಿ ಸಲ್ಲಿಸಿತ್ತು. ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎನ್. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ದಿನಗೂಲಿ ನೌಕರರು ಭತ್ಯೆ, ರಜೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.