ಈಗಿನ ಬ್ರ್ಯಾಂಡೆಡ್ ಲೋಕಗಳು ಪೋಷಕರಿಗೆ ಅಷ್ಟೊಂದು ಹಿಡಿಸೋದಿಲ್ಲ. ಬ್ರ್ಯಾಂಡ್ಗಳ ಹೆಸರಲ್ಲಿ ವ್ಯರ್ಥ ಖರ್ಚು ಅಂತಾನೇ ಹೆಚ್ಚಿನ ಪೋಷಕರು ಮಕ್ಕಳ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಾರೆ. ಇದೀಗ ಇದೇ ಸಾಲಿಗೆ ವಿಡಿಯೋವೊಂದು ಸೇರಿದ್ದು ಇದರಲ್ಲಿ ದುಬಾರಿ ಬೆಲೆಯ ಬೆಲ್ಟ್ ಖರೀದಿ ಮಾಡಿದ ಪುತ್ರಿಗೆ ತಾಯಿ ಚೆನ್ನಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗುಸ್ಸಿ ಕಂಪನಿಯ ಬೆಲ್ಟ್ ಇದಾಗಿದ್ದು ಇದರ ಬೆಲೆ ಬರೋಬ್ಬರಿ 35 ಸಾವಿರ ರೂಪಾಯಿ ಆಗಿದೆ. ಇದನ್ನ ಚಬಿ ಗುಪ್ತಾ ಎಂಬವರು ಖರೀದಿ ಮಾಡಿದ್ದರು. ಈ ಬೆಲ್ಟ್ನ ಬೆಲೆಯನ್ನ ತಿಳಿದ ತಾಯಿ ಅನಿತಾ ಗುಪ್ತಾ, ಇದು ಶಾಲಾ ಮಕ್ಕಳ ಸಮವಸ್ತ್ರದ ಬೆಲ್ಟ್ನಂತಿದೆ ಎಂದು ಗೇಲಿ ಮಾಡಿದ್ದಾರೆ .
ಈ ಫನ್ನಿ ಕ್ಷಣವನ್ನ ಚಬಿ ಗುಪ್ತಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುಸ್ಸಿ ಲೋಗೋವನ್ನ ಹೊಂದಿದ್ದ ಕೆಂಪು ಹಾಗೂ ಹಸಿರು ಬಣ್ಣದ ಬೆಲ್ಟ್ ಇದಾಗಿದೆ. ಈ ಬೆಲ್ಟ್ನ ಬೆಲೆ ಎಷ್ಟು ಎಂದು ತಾಯಿ ಕೇಳಿದ್ದಾರೆ. ಇದಕ್ಕೆ ಚಬಿ ಇದರ ಬೆಲೆ 35 ಸಾವಿರ ರೂಪಾಯಿ ಆಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಆಶ್ಚರ್ಯವ್ಯಕ್ತಪಡಿಸಿದ ಅನಿತಾ ಗುಪ್ತಾ, ಏನು ಈ ಬೆಲ್ಟ್ಗೆ 35 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ಯಾ.. ? ಅಂತಾ ವಿಶೇಷತೆ ಈ ಬೆಲ್ಟ್ನಲ್ಲಿ ಏನಿದೆ..? ಅಲ್ಲದೇ ಇದೇನಿದು ಜಿಜಿ..? ಇದು 150 ರೂಪಾಯಿ ಕೊಟ್ಟು ಖರೀದಿ ಮಾಡಿದ ಬೆಲ್ಟ್ನಂತಿದೆ. ಬೇರೆ ಕಡೆ ಎಲ್ಲಾದರೂ ಪ್ರಯತ್ನ ಪಟ್ಟಿದ್ದರೆ ನೀನಿದನ್ನ 150 ರೂಪಾಯಿಗೆ ಖರೀದಿ ಮಾಡಬಹುದಿತ್ತು ಎಂದು ಹೇಳಿದ್ದಾರೆ.
ತಾಯಿಯ ಈ ಮಾತುಗಳನ್ನ ಕೇಳಿ ಚಬಿ ಬಿದ್ದು ಬಿದ್ದು ನಗುತ್ತಿದ್ದರೆ ತಾಯಿ ಅನಿತಾ, ಖಾಲಿ ಕೈಯಲ್ಲಿ ಹಣ ಇದ್ದರೆ ಅದು ವ್ಯರ್ಥವಾಗುತ್ತೆ ಎಂದು ಹೇಳಿದ್ದಾರೆ.
https://www.instagram.com/tv/CQCHH_ag69e/?utm_source=ig_web_copy_link