ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿಗೀಡಾಗಿ ಒಂದು ವರ್ಷ ಕಳೆದಿದೆ. ಈ ದಿನದಂದು ನಟಿ ರಿಯಾ ಚಕ್ರವರ್ತಿ ಸುಶಾಂತ್ ಸಿಂಗ್ರನ್ನ ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನ ಶೇರ್ ಮಾಡಿದ್ದಾರೆ. ಸುಶಾಂತ್ ಮೃತರಾಗುವುದಕ್ಕೂ ಮುನ್ನ ನಟಿ ರಿಯಾ ಚಕ್ರವರ್ತಿ ಜೊತೆ ಡೇಟಿಂಗ್ನಲ್ಲಿದ್ದರು ಎನ್ನಲಾಗಿತ್ತು.
ಸುಶಾಂತ್ರನ್ನ ನೆನೆದು ಇನ್ಸ್ಟಾದಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ ರಿಯಾ, ನೀನು ನನ್ನೊಂದಿಗೆ ಇಲ್ಲ ಅನ್ನೋದನ್ನ ನಾನು ಒಂದು ಕ್ಷಣಕ್ಕೂ ನಂಬಿಲ್ಲ. ಸಮಯ ಎಲ್ಲವನ್ನೂ ಗುಣಪಡಿಸುತ್ತೆ ಎಂದು ಹೇಳುತ್ತಾರೆ. ಆದರೆ ನೀನೇ ನನ್ನ ಸಮಯ ಹಾಗೂ ಎಲ್ಲದೂ ಆಗಿದ್ದೀಯಾ. ನೀನಿಗ ನನ್ನನ್ನ ರಕ್ಷಣೆ ಮಾಡುವ ಏಂಜೆಲ್ ಆಗಿದ್ದೀಯಾ ಅನ್ನೋದು ನನಗೆ ತಿಳಿದಿದೆ. ಚಂದ್ರನ ಅಂಗಳದಲ್ಲಿ ಕೂತು ಟೆಲಿಸ್ಕೋಪ್ನ ಸಹಾಯದಿಂದ ನನ್ನನ್ನ ನೋಡುತ್ತಿರಬಹುದು. ನಿನಗಾಗಿ ನಾನು ಪ್ರತಿದಿನ ಕಾಯುತ್ತೇನೆ. ನಿನಗಾಗಿ ಎಲ್ಲ ಕಡೆ ಹುಡುಕಾಡುತ್ತೇನೆ. ನನಗೊತ್ತು ನೀನಿಲ್ಲಿ ನನ್ನ ಜೊತೆಯೇ ಇದ್ದೀಯಾ.
ನೀನಿಲ್ಲದೇ ನನಗೆ ಜೀವನವೇ ಇಲ್ಲ. ನನ್ನ ಜೀವನದ ಅರ್ಥವನ್ನ ನೀನೇ ತೆಗೆದುಕೊಂಡಿದ್ದೀಯಾ. ಈ ಖಾಲಿತನವನ್ನ ನಿನ್ನೊಬ್ಬನ್ನ ಹೊರತುಪಡಿಸಿ ಇನ್ಯಾರಿಂದಲೂ ತುಂಬಲು ಸಾಧ್ಯವಿಲ್ಲ. ನಿನಗೆ ಪ್ರತಿದಿನ ಮಾಲ್ಪುವಾ ( ಖಾದ್ಯದ ಹೆಸರು) ಮಾಡಿಕೊಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೇ ಈ ಜಗತ್ತಿನಲ್ಲಿರುವ ಎಲ್ಲಾ ಕ್ವಾಂಟಮ್ ಫಿಸಿಕ್ಸ್ ಪುಸ್ತಕವನ್ನ ಓದುತ್ತೇನೆ. ದಯಮಾಡಿ ವಾಪಸ್ ಬಾ ಎಂದು ಬರೆದುಕೊಂಡಿದ್ದಾರೆ. #mywholeheart ಎಂಬ ಹ್ಯಾಶ್ಟ್ಯಾಗ್ನ ಅಡಿಯಲ್ಲಿ ಈ ಪೋಸ್ಟ್ ಶೇರ್ ಮಾಡಿದ್ದಾರೆ.
ಮುಂಬೈನ ತಮ್ಮ ನಿವಾಸದಲ್ಲಿ ಕಳೆದ ವರ್ಷ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ರ ಮೃತದೇಹ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣವನ್ನ ಸಿಬಿಐ ಕೈಗೆತ್ತಿಕೊಂಡಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಈಗಾಲೇ ರಿಯಾ ಚಕ್ರವರ್ತಿ ಹಾಗೂ ಆಕೆಯ ಕುಟುಂಬ ಮತ್ತು ಸುಶಾಂತ್ರ ಕೆಲ ಸಿಬ್ಬಂದಿಯನ್ನ ವಿಚಾರಣೆಗೆ ಒಳಪಡಿಸಲಾಗಿದೆ. ಅಲ್ಲದೇ ರಿಯಾ ಹಾಗೂ ಆಕೆಯ ಸಹೋದರ ಮಾದಕ ದ್ರವ್ಯಗಳ ತನಿಖೆ ಅಡಿಯಲ್ಲಿ ಎನ್ಸಿಬಿ ಬಂಧಿಸಿತ್ತು. ಇವರಿಬ್ಬರೂ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ.
https://www.instagram.com/p/CQGK6hgHldL/?utm_source=ig_web_copy_link