alex Certify ಕೈಯಲ್ಲಿ ಮಗು ಎತ್ತುಕೊಂಡೇ ಕ್ಯಾಚ್ ಹಿಡಿದ ಮಹಿಳೆ..! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಲ್ಲಿ ಮಗು ಎತ್ತುಕೊಂಡೇ ಕ್ಯಾಚ್ ಹಿಡಿದ ಮಹಿಳೆ..! ವಿಡಿಯೋ ವೈರಲ್​

ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯುತ್ತಿರೋ ವೇಳೆ ಆಟಗಾರರಿಗಿಂತ ಕೆಲವೊಮ್ಮೆ ಪ್ರೇಕ್ಷಕರು ಹೆಚ್ಚು ಹೈಲೈಟ್​ ಆಗಿ ಬಿಡ್ತಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಪ್ರೇಕ್ಷಕರ ರಿಯಾಕ್ಷನ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಬಿಡುತ್ತವೆ.

ಬೇಸ್​ಬಾಲ್​ ಪಂದ್ಯಾವಳಿ ವೇಳೆಯಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಲೆಕ್ಸಿ ವೈಟ್​ಮೋರ್​ ಎಂಬ ಹೆಸರಿನ ಮಹಿಳೆ ಚಿಕೋಗಾದ ಮೈದಾನದವೊಂದರಲ್ಲಿ ನಡೆಯುತ್ತಿದ್ದ ಪಂದ್ಯವನ್ನ ವೀಕ್ಷಿಸಲು ತನ್ನ ಮೂರು ತಿಂಗಳ ಕಂದಮ್ಮನೊಡನೆ ತೆರಳಿದ್ದಳು.

ಚೆಂಡು ಮೈದಾನದಿಂದ ಹಾರಿ ಈ ತಾಯಿಯ ಬಳಿಯೇ ಹೋಗಿದೆ. ಈಕೆ ಒಂದು ಕೈಯಲ್ಲಿ ಮೂರು ತಿಂಗಳ ಕಂದಮ್ಮನನ್ನ ಹಿಡಿದು ಇನ್ನೊಂದು ಕೈನಿಂದ ಚೆಂಡನ್ನ ಕ್ಯಾಚ್​ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಮೂಲಕ ಇಡೀ ಮೈದಾನದ ದೃಷ್ಟಿ ತನ್ನತ್ತ ಹರಿಯುವಂತೆ ಮಾಡಿದ್ದಾಳೆ ಈ ಸೂಪರ್​ ಮದರ್​…!

ಯುಟ್ಯೂಬ್​ ಚಾನೆಲ್​ ಎಂಎಲ್​ಬಿಯಲ್ಲಿ ಈ ವಿಡಿಯೋವನ್ನ ಶೇರ್​ ಮಾಡಲಾಗಿದ್ದು, ತಾಯಂದಿರು ಮಗುವನ್ನ ಕಂಕುಳಲ್ಲಿ ಹಿಡಿದುಕೊಂಡೇ ಏನೂ ಬೇಕಿದ್ದರೂ ಮಾಡಬಲ್ಲರು. ಅವರು ವಿಫಲ ಎಸೆತಕ್ಕೊಳಗಾದ ಚೆಂಡನ್ನೂ ಹಿಡಿಯಬಲ್ಲರು ಎಂದು ಶೀರ್ಷಿಕೆ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...