ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿರುವ ಸ್ಯಾಂಡಲ್ ವುಡ್ ನಟ ಸಂಚಾರಿ ವಿಜಯ್ ಆರೋಗ್ಯ ಕ್ಷಣ ಕಣಕ್ಕೂ ಬಿಗಡಾಯಿಸುತ್ತಿದ್ದು, ಇದೀಗ ಬ್ರೇನ್ ಸ್ಟ್ರೋಕ್ ಕೂಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಗುಡ್ ನ್ಯೂಸ್: ಮಾರ್ಗಸೂಚಿ ಬಿಡುಗಡೆ ಸಾಧ್ಯತೆ
ಅಪಘಾತಕ್ಕೀಡಾಗಿರುವ ನಟ ಸಂಚಾರಿ ವಿಜಯ್ ರನ್ನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವವಾಗಿರುವುದರಿಂದ ಈಗಾಗಲೇ ಶಸ್ರಚಿಕಿತ್ಸೆ ಮಾಡಲಾಗಿದ್ದು, ಕೋಮಾ ಸ್ಥಿತಿಗೆ ಜಾರಿದ್ದಾರೆ. ಈ ನಡುವೆ ಇಂದು ಮುಂಜಾನೆ 5 ಗಂಟೆಗೆ ವಿಜಯ್ ಗೆ ಬ್ರೇನ್ ಸ್ಟ್ರೋಕ್ ಆಗಿದ್ದು, ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವೇಗ ಪರೀಕ್ಷಿಸಿಕೊಳ್ಳಲು ಕುದುರೆ ಮರಿಯೊಂದಿಗೆ ʼರೇಸ್ʼ ಗಿಳಿದ ಧೋನಿ
ಇನ್ನು ಸಂಚಾರಿ ವಿಜಯ್ ಅವರ ಸ್ನೇಹಿತ ನವೀನ್ ಸ್ಥಿತಿ ಕೂಡ ಗಂಭೀರವಾಗಿದ್ದು, ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ನಟ ಸಂಚಾರಿ ವಿಜಯ್ ತಮ್ಮ ಸ್ನೇಹಿತ ನವೀನ್ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು, ಬೈಕ್ ಸ್ಕಿಡ್ ಆಗಿ ಕರೆಂಟ್ ಕಂಬಕ್ಕೆ ಗುದ್ದಿದ್ದರು. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.