ನೀವು ಕತೆ, ಸಿನಿಮಾಗಳಲ್ಲಿ ನೋಡಿರಬಹುದು, ಮೊದಲ ಪ್ರೀತಿ ಮುರಿದು ಬಿದ್ದ ಸಂದರ್ಭದಲ್ಲಿ ಹೃದಯವೇ ಛಿದ್ರ ವಾದಂತೆ ಒದ್ದಾಡಿ ಆತ್ಮಹತ್ಯೆಯಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಆದರೆ ನಿಜ ಜೀವನದಲ್ಲಿ ನೀವು ಹೀಗೆ ಇರಬೇಕಿಲ್ಲ.
ಪ್ರೀತಿ ಮುರಿದುಬಿದ್ದ ಬಳಿಕ ಹಳೆಯ ನೆನಪನ್ನು ಕಡಿಮೆ ಮಾಡಿಕೊಳ್ಳಿ. ಆರಂಭದಲ್ಲಿ ಇದು ಅಸಾಧ್ಯ ಎನಿಸಿದರೂ ಕ್ರಮೇಣ ಅದು ಸಾಧ್ಯವಾಗುತ್ತದೆ. ನಿಮ್ಮ ಪ್ರೀತಿಯಲ್ಲಿ ಯಾವ ಲೋಪ ಇತ್ತು ಎಂಬುದನ್ನು ತಿಳಿದುಕೊಳ್ಳಿ.
ಹಲಸಿನ ಬೀಜಗಳನ್ನು ಬಿಸಾಡಬೇಡಿ
ದ್ವೇಷ ಬಿಟ್ಟುಬಿಡಿ. ಇದು ನಿಮಗೆ ಮತ್ತಷ್ಟು ನೋವು ಕೊಡುತ್ತದೆ ಹೊರತು ಅಲ್ಲಿಂದ ನಿಮ್ಮನ್ನು ಹೊರಬರಲು ಬಿಡುವುದಿಲ್ಲ. ಕ್ಷಮಿಸಿ ಹಾಗೂ ಹೊರಬನ್ನಿ.
ನಿಮ್ಮಿಷ್ಟದ ಕೆಲಸದ ಕಡೆ ಹೆಚ್ಚಿನ ಗಮನ ಕೊಡಿ. ಗಾರ್ಡನಿಂಗ್ ಮಾಡಿ. ಅಡುಗೆಯಲ್ಲಿ ತೊಡಗಿ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ. ಉತ್ತಮ ಸಿನಿಮಾ ನೋಡಿ. ಒಳ್ಳೆಯ ಪುಸ್ತಕಗಳನ್ನು ಓದಿ. ಇಷ್ಟವಾಗುವ ವಿಷಯದ ಬಗ್ಗೆ ಬರೆಯಿರಿ. ನಿಮ್ಮ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡದ ಗೆಳೆಯರೊಂದಿಗೆ ಹಾಗೂ ಕುಟುಂಬದವರೊಂದಿಗೆ ಸಮಯ ಕಳೆಯಿರಿ. ಇದು ಮತ್ತೆ ಹೊಸ ಜೀವನವನ್ನು ಕಟ್ಟಿಕೊಳ್ಳಲು ನಿಮಗೆ ನೆರವಾಗುತ್ತದೆ.