ಕೋವಿಡ್ ಸಾಂಕ್ರಮಿಕದ ಕಾರಣದಿಂದಾಗಿ ಒಪ್ಪೊತ್ತಿನ ಕೂಳಿಗೂ ಸಂಕಷ್ಟದಲ್ಲಿರುವ ಮಂದಿಗೆ ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ’ಘರ್‌ಘರ್‌ರೇಷನ್’ ಯೋಜನೆಗೆ ಚಾಲನೆ ಕೊಟ್ಟಿದೆ.
ಈ ಯೋಜನೆಗೆ ಬ್ಯಾಂಕಿನ ನೌಕರರು ಹಣ ಹೊಂದಿಸಿದ್ದಾರೆ. ಈ ಸತ್ಕಾರ್ಯದೊಂದಿಗೆ ಇನ್ನಷ್ಟು ಯೋಜನೆಗಳನ್ನು ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ತನ್ನ ನೌಕರರಿಗೆ ಪರಿಚಯಿಸಿದೆ.
ಕನಿಷ್ಠ ಮಟ್ಟದ ಆದಾಯ ಪಡೆಯುತ್ತಿರುವ ತಮ್ಮ ಗ್ರಾಹಕರಿಗೆಂದು ಈ ಯೋಜನೆ ತಂದಿರುವ ಬ್ಯಾಂಕಿನ ಉದ್ಯೋಗಿಗಳು ಸುಮಾರು 50,000 ಮಂದಿಗೆ ಪಡಿತರ ವ್ಯವಸ್ಥೆ ಮಾಡಲು ನಿಧಿ ಸಂಗ್ರಹಿಸುತ್ತಿದ್ದಾರೆ.
ರಾಜ್ಯದಲ್ಲಿಂದು 125 ಸೋಂಕಿತರು ಸಾವು –ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ
ಈ ರೇಷನ್ ಕಿಟ್‌ಗಳಲ್ಲಿ 10ಕೆಜಿ ಅಕ್ಕಿ, ಎರಡು ಕೆಜಿ ಧಾನ್ಯಗಳು, ಒಂದು ಕೆಜಿ ಸಕ್ಕರೆ ಹಾಗೂ ಉಪ್ಪು, ಒಂದು ಕೆಜಿ ಅಡುಗೆ ಎಣ್ಣೆ, ಮಸಾಲೆ ಪದಾರ್ಥಗಳ ಐದು ಪ್ಯಾಕೆಟ್‌ಗಳು, ಟೀ ಹಾಗೂ ಬಿಸ್ಕತ್‌ಗಳು ಸೇರಿದಂತೆ ಅನೇಕ ವಸ್ತುಗಳನ್ನು ತಮ್ಮ ಗ್ರಾಹಕರು ಹಾಗೂ ಅವರ ಕುಟುಂಬಸ್ಥರಿಗೆ ಕೊಡಲು ಬ್ಯಾಂಕಿನ ಉದ್ಯೋಗಿಗಳು ತಮ್ಮ ತಿಂಗಳೊಂದರ ಸಂಬಳ ಮೀಸಲಿಟ್ಟಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಹಕರ ಮನೆಬಾಗಿಲುಗಳಿಗೇ ಈ ರೇಷನ್‌ಗಳನ್ನು ಉದ್ಯೋಗಿಗಳು ತಲುಪಿಸುತ್ತಿದ್ದಾರೆ. ಇದೇ ವೇಳೆ ಕನಿಷ್ಠ ಆದಾಯ ಇರುವ ನಗರ ಪ್ರದೇಶದ ಗ್ರಾಹಕರಿಗೆ ದಿನಸಿ ಖರೀದಿಸಲು 1800 ರೂ. ಮೌಲ್ಯದ ಪ್ರೀಪೇಡ್ ಕಾರ್ಡ್‌ಗಳನ್ನು ವಿತರಿಸಲಾಗಿದೆ.