ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಅರುಣಾಚಲ ಪ್ರದೇಶದ ಗ್ರಾಮವೊಂದರ ಜನರ ಮನವೊಲಿಸಲೆಂದು ತಲಾ 20 ಕೆಜಿ ಅಕ್ಕಿ ವಿತರಿಸುವ ನಿರ್ಧಾರವೊಂದಕ್ಕೆ ಸ್ಥಳೀಯಾಡಳಿತ ಮುಂದಾಗಿದೆ.
ಇಲ್ಲಿನ ಲೋವರ್ ಸುಬಾನ್ಸಿರಿ ಜಿಲ್ಲೆಯ ಯಝಲಿ ಎಂಬ ಊರಿನ ವೃತ್ತಾಧಿಕಾರಿ ತಾಶಿ ವಾಂಗ್ಚುಕ್ ಥಾಂಗ್ಡಾಕ್ರ ಐಡಿಯಾ ಇದಾಗಿದ್ದು, ಲಸಿಕೆ ಪಡೆಯಲು ಮುಂದೆ ಬರುವ 45 ವರ್ಷ ಮೇಲ್ಪಟ್ಟ ಮಂದಿಗೆ 20 ಕೆಜಿ ಅಕ್ಕಿ ನೀಡುವ ಆಫರ್ ಬುಧವಾರದವರೆಗೂ ಇತ್ತು.
ಲಾಕ್ ಡೌನ್ ಎಫೆಕ್ಟ್: ಅಪಾರ್ಟ್ಮೆಂಟ್ ಒಂದರ ಬಾಲ್ಕನಿಗೆ ಬಂದು ಕುಳಿತ ಅಪರೂಪದ ಪಕ್ಷಿಗಳು
“ಈ ವೃತ್ತದಲ್ಲಿ ಹಾಗೂ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಚುರುಕು ನೀಡಲು ನಾವು ಸತತವಾಗಿ ಯತ್ನಿಸುತ್ತಾ ಬಂದಿದ್ದೇವೆ. ಇಂದು ಮದ್ಯಾಹ್ನದವರೆಗೂ 80 ಮಂದಿ ಬಂದು ಲಸಿಕೆ ಪಡೆದಿದ್ದಾರೆ. ಜೂನ್ 20ರ ವೇಳೆಗೆ 100 ಪ್ರತಿಶತ ಲಸಿಕೆಗಳನ್ನು ಹಾಕುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ಅರುಣಾಚಲ ನಾಗರಿಕ ಸೇವೆ ಅಧಿಕಾರಿ ಥಾಂಗ್ಡಾಕ್ ತಿಳಿಸಿದ್ದು, ಈ ಆಫರ್ ಕಾರಣದಿಂದಾಗಿ ಬಹಳಷ್ಟು ಮಂದಿ ಮಳೆಯನ್ನೂ ಲೆಕ್ಕಿಸದೇ ದೂರದೂರುಗಳಿಂದ ಜನರು ಲಸಿಕೆ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿಯಲ್ಲಿ ಅನಿರೀಕ್ಷಿತ ಬೆಳವಣಿಗೆ: ನಾಯಕತ್ವ ಮಾತ್ರವಲ್ಲ, ಉಸ್ತುವಾರಿ ಬದಲಾವಣೆಗೂ ಭಿನ್ನರ ಒತ್ತಡ…?
ಲಸಿಕೆ ಪಡೆಯುವವರಿಗೆ ಅಕ್ಕಿ ವಿತರಣೆ ದೊಡ್ಡ ಮಟ್ಟದಲ್ಲಿ ಆಗಬೇಕಾದರೆ ಮುಂದಿನ ದಿನಗಳಲ್ಲಿ 20ಕೆಜಿ ಬದಲಿಗೆ 10ಕೆಜಿ ಅಕ್ಕಿಯನ್ನು ಪ್ರತಿ ತಲೆಗೆ ವಿತರಿಸಲಾಗುವುದು ಎಂದು ಥಾಂಗ್ಡಾಕ್ ತಿಳಿಸಿದ್ದಾರೆ. ಇಲ್ಲಿನ ವಿವೇಕಾನಂದ ವಿದ್ಯಾಕೇಂದ್ರ ವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಿಬ್ಬರು ಫಲಾನುಭವಿಗಳಿಗೆ ಅಕ್ಕಿ ವಿತರಣೆ ಮಾಡಲು ಮುಂದೆ ಬಂದಿದ್ದಾರೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ.