ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಾಕುನಾಯಿಯೊಂದು ಮಾಲೀಕನ ಚಿನ್ನದ ಸರವನ್ನು ತುಂಡರಿಸಿ ನುಂಗಿದೆ. 20 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡ ಕುಟುಂಬದವರು ನಾಯಿ ಮಲದ ಜೊತೆಗೆ ಬಂಗಾರದ ತುಣುಕುಗಳು ಬರಬಹುದು ಎಂದು ಕಾಯುವಂತಾಗಿದೆ.
ಕಾರಟಗಿ ಪಟ್ಟಣದ ದಿಲೀಪ್ ಕುಮಾರ್ ಅವರ ಮನೆಯಲ್ಲಿರುವ ಪಮೋರಿಯನ್ ತಳಿಯ ಸಾಕುನಾಯಿ ತಲೆದಿಂಬಿನ ಪಕ್ಕದಲ್ಲಿ ಇಟ್ಟಿದ್ದ ಚಿನ್ನದ ಸರವನ್ನು ತುಂಡರಿಸಿ ನುಂಗಿದೆ. ಪಶು ವೈದ್ಯರ ಬಳಿಗೆ ನಾಯಿ ಕರೆದುಕೊಂಡು ಹೋದ ಸಂದರ್ಭದಲ್ಲಿ ನಾಯಿ ಬಹಿರ್ದೆಸೆ ಮಾಡಿದ್ದು, ಒಂದೆರಡು ಚಿನ್ನದ ತುಣುಕುಗಳು ಕಂಡುಬಂದಿದೆ.
ಚಿನ್ನದ ಸರ ಮುಖ್ಯವಲ್ಲ, ನಾಯಿಗೆ ಯಾವುದೇ ತೊಂದರೆಯಾಗಬಾರದು ಎಂದು ಕುಟುಂಬಸ್ಥರು ಹೇಳಿದ್ದಾರೆ. ಚಿನ್ನದ ತುಣುಕುಗಳು ಹೊರಗೆ ಬಾರದಿದ್ದರೆ ಎಕ್ಸರೇ ಮಾಡಿ ಸರ್ಜರಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.