37 ವರ್ಷದ ಮಹಿಳೆಯೊಬ್ಬರು ಒಮ್ಮೆಗೇ 10 ಮಕ್ಕಳಿಗೆ ಜನ್ಮವಿತ್ತ ಕಥೆಯೊಂದು ವೈರಲ್ ಆಗಿದ್ದು, ಈ ಸುದ್ದಿ ನಿಜವೇ ಎಂದು ನೆಟ್ಟಿಗರು ಖುದ್ದು ದಕ್ಷಿಣ ಆಫ್ರಿಕಾ ಸರ್ಕಾರವನ್ನು ವಿಚಾರಣೆ ಮಾಡಿದ್ದಾರೆ.
ಹತ್ತು ಮಕ್ಕಳಲ್ಲಿ ಏಳು ಗಂಡು ಹಾಗೂ ಮೂರು ಹೆಣ್ಣು ಎನ್ನಲಾಗಿದ್ದು, ಈ ಬಗ್ಗೆ ದಕ್ಷಿಣ ಆಫ್ರಿಕಾದ ಯಾವುದೇ ಆಸ್ಪತ್ರೆಯಲ್ಲೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಭಾವಿ ಅಳಿಯನ ಸಂಪಾದನೆ ತಿಳಿದುಕೊಳ್ಳಲು ಅತ್ತೆ – ಮಾವನಿಂದ ಹೈಡ್ರಾಮಾ…!
ಪ್ರಿಟೋರಿಯಾದ ಆಸ್ಪತ್ರೆಯೊಂದರಲ್ಲಿ ಗೋಸಿಯೇಮ್ ಸಿಟ್ಹೋಲ್ 10 ಮಕ್ಕಳಿಗೆ ಜನ್ಮಕೊಟ್ಟ ಸುದ್ದಿ ಜಗತ್ತಿನೆಲ್ಲೆಡೆ ಹೆಡ್ಲೈನ್ ಆಗಿದ್ದು, ಇದರ ಸತ್ಯಾಸತ್ಯತೆ ಕುರಿತಂತೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ.
ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳುವ ಮುನ್ನ ಈ ಸುದ್ದಿ ಓದಿ…!
ಈ ಬಗ್ಗೆ ಖುದ್ದು ಸ್ಪಷ್ಟನೆ ಕೊಟ್ಟಿರುವ ಗೌಟೆಂಗ್ ಪ್ರಾಂತ್ಯದ ಪ್ರಾಂತೀಯ ಸರ್ಕಾರವು, ತಾನು ಈ ಕುರಿತಂತೆ ಆಳವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮಕೊಟ್ಟ ದಾಖಲೆಗಳಿಲ್ಲ ಎಂದಿದೆ.